ವಿಟ್ಲ: ಮಾಣಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಮಕ್ಕಳ ಗ್ರಾಮ ಸಭೆ ಜ. 21ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆಸಿದರು.
ಮಂಗಳೂರು ಪಡಿ ಸಂಸ್ಥೆಯ ಪ್ರೇಮಿ ಫರ್ನಾಂಡಿಸ್, ಮಾಣಿ ಸಿ.ಆರ್.ಪಿ ಸತೀಶ್ ರಾವ್ ರವರು ಆಗಮಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಗ್ರಂಥಾಲಯ ಮೇಲ್ವಿಚಾರಕಿ ಗೀತಾಶ್ವಿನಿರವರು ಮಕ್ಕಳಿಗೆ ಗ್ರಂಥಾಲಯದ ಸದುಪಯೋಗದ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಆಳ್ವ ಕೆ., ಇಬ್ರಾಹಿಂ ಕೆ., ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ, ಪ್ರೀತಿ ಡಿನ್ನಾ ಪಿರೇರಾ, ಸೀತಾ, ಮಿತ್ರಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜ ಪಿ., ಕರ್ನಾಟಕ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಚೆನ್ನಪ್ಪ ಗೌಡ ಎಸ್. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಭಾರತಿ ಯಂ., ವಿದ್ಯಾರ್ಥಿ ನಾಯಕಿ ತೃಪ್ತಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು.