ಫೆ.2: ಕೋಚಕಟ್ಟೆ ಮದ್ರಸದ ಬೆಳ್ಳಿ ಹಬ್ಬ ಹಾಗೂ ಸ್ವಲಾತ್ ವಾರ್ಷಿಕ ಪ್ರಯುಕ್ತ ಏಕದಿನ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ

0

ಪುತ್ತೂರು:ನೂರುಲ್ ಹುದಾ ಅರೇಬಿಕ್ ಮದ್ರಸ ಕೋಚಕಟ್ಟೆ ಇದರ ಬೆಳ್ಳಿ ಹಬ್ಬ ಹಾಗೂ ವಾರ್ಷಿಕ ಸ್ವಲಾತ್ ಮಜ್ಲಿಸ್ ಪ್ರಯುಕ್ತ ಏಕದಿನ ಧಾರ್ಮಿಕ ಮತ ಪ್ರವಚನ ಫೆಬ್ರವರಿ 02ರಂದು ಮದ್ರಸ ಅಧ್ಯಕ್ಷ ಜ/ಹಮೀದ್ ಅಜ್ಮೀರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಗ್ರಿಬ್ ನಮಾಝ್ ಬಳಿಕ A&B ಜುಮಾ ಮಸೀದಿ ಮುದರ್ರೀಸ್ ಬಹು ಶೈಖುನಾ ಮೊಯಿದು ಫೈಝಿ ಉಸ್ತಾದರ ನೇತೃತ್ವದಲ್ಲಿ ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್ ಇದರ ವಾರ್ಷಿಕ ಸಂಗಮ ನಡೆಯಲಿದ್ದು,ರಾತ್ರಿ 8ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹು/ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕ್ಕಲ್ ದುಃಆ ಕಾರ್ಯಕ್ರಮ ನೆರವೇರಿಸಲಿದ್ದಾರೆ.

N H ಮದ್ರಸ ಕೋಚಕಟ್ಟೆ ಸದರ್ ಉಸ್ತಾದ್ ಬಹು/ಫಾರೂಕ್ ದಾರಿಮಿ ಸ್ವಾಗತ ಭಾಷಣ ಮಾಡಲಿದ್ದು, ಕುಂತೂರು ಮುದರ್ರೀಸ್ ಉಸ್ತಾದ್ ಅಲ್ಲಾಹನ ನಾಮದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಂತರ ಪ್ರಗಲ್ಬ ವಾಗ್ಮಿ ಬಹು/ಉಮೈರ್ ದಾರಿಮಿ ವೆಳ್ಳಾಯಿಕೋಡ್ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ದಲ್ಲಿ ಹಲವಾರು ಧಾರ್ಮಿಕ ಉಲಮಾ ಉಮಾರ ನೇತಾರರು ಭಾಗವಹಿಸಲಿದ್ದಾರೆ.ಹಾಗೂ ಕೊನೆಯಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here