ಸವಣೂರು ಕನ್ನಡ ಕುಮೇರು ರಸ್ತೆ ಬದಿ..! ಕಸ ಕಡ್ಡಿಗಳ ರಾಶಿ ರಾಶಿ

0

ಪುತ್ತೂರು: ದಿನ ದಿನೇ ಕಸದ ರಾಶಿ ಹೆಚ್ಚಾಗುತ್ತಿದೆ. ಕಸ ಕಡ್ಡಿ, ಪ್ಲಾಸ್ಟಿಕ್, ತ್ಯಾಜ್ಯ ಎಸೆಯಲಾಗುತ್ತಿದ್ದು, ಇದು ಕಸದ ತೊಟ್ಟಿಯ ರೂಪ ಪಡೆಯುತ್ತಿದ್ದರೂ ಸ್ಥಳೀಯಾಡಳಿತ ಕ್ಯಾರೇ ಅಂದಿಲ್ಲ..! ಸವಣೂರು ಗ್ರಾ.ಪಂ.ಗೆ ಒಳಪಟ್ಟ ಕನ್ನಡಕುಮೇರು ಎಂಬಲ್ಲಿನ ಸ್ಥಿತಿ ಇದು. ಸವಣೂರು-ಬೆಳ್ಳಾರೆ ರಸ್ತೆ ಬದಿಯಲ್ಲೇ ಕಸದ ಕೊಂಪೆ ತುಂಬಿದೆ. ಬೀದಿ ನಾಯಿಗಳ ಕಾಟದಿಂದ ಅದು ಎಲ್ಲೆಡೆ ಹರಡುತ್ತಿದೆ.

ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳ ಸಹಿತ ಪುತ್ತೂರು ಕೇಂದ್ರ ಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಅದಾಗ್ಯೂ ಸವಣೂರು ಗ್ರಾ.ಪಂ. ಅಧಿಕಾರಿಗಳ ಕಣ್ಣಿಗೆ ಕಸದ ರಾಶಿ ಬೀಳದಿರುವುದು ಆಶ್ಚರ್ಯ ಮೂಡಿಸಿದೆ ಎನ್ನುತ್ತಾರೆ ಸ್ಥಳೀಯರು. ಇಲ್ಲೇ ಪಕ್ಕದಲ್ಲಿ ಹಿಂದೂ ರುದ್ರಭೂಮಿಯಿದ್ದು, ಕೂಗಳತೆ ದೂರದಲ್ಲಿ ಮೋರಿ ಸಮೀಪ ತ್ಯಾಜ್ಯ ಎಸೆಯಲಾಗುತ್ತಿದೆ. ಪರಣೆಯಿಂದ ಸವಣೂರು ತನಕವೂ ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಎಸೆದಿರುವುದು ಕಂಡು ಬರುತ್ತಿದೆ.

ಸಿಸಿ ಕ್ಯಾಮರಾ ಅಳವಡಿಸಿ

ಕನ್ನಡಕುಮೇರು ಬಳಿ ಕಸ ತುಂಬಿರುವ ಸ್ಥಳದ ಆಸುಪಾಸಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ಹೆಕ್ಕಿಸಿ ಅವರಿಗೆ ದಂಡ ವಿಧಿಸಿ ಎಂಬುದು ಸಾರ್ವಜನಿಕರ ಆಶ್ರಯವಾಗಿದೆ.

LEAVE A REPLY

Please enter your comment!
Please enter your name here