ಕುಂಜಾಡಿ ಸೇತುವೆ ಸಮೀಪ ಧೂಳುಮಯ.!! ಮುಕ್ತಿ ಯಾವಾಗ?

0

ಪುತ್ತೂರು: ಸವಣೂರು – ಬೆಳ್ಳಾರೆ ರಸ್ತೆಯ ಬೊಬ್ಬರ್ಯ ಕಾಡು ಸಮೀಪ ಕುಂಜಾಡಿ ಹತ್ತಿರ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸೇತುವೆ ಇತ್ತೀಚಿಗೆ ನಿರ್ಮಾಣಗೊಂಡಿದೆ. ಇದರ ಸುತ್ತುಮುತ್ತ ರಸ್ತೆ ಕಾಮಗಾರಿಯಿಂದಾಗಿ‌ ಧೂಳು ಆವರಿಸಿದೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣಗೊಂಡಿದೆ.

ದ್ವಿಚಕ್ರ ವಾಹನ ಸವಾರರ ಪಾಡು ಶೋಚನೀಯವಾಗಿದ್ದು, ಬಟ್ಟೆ, ವಾಹನ ಧೂಳಿನಿಂದ ಆವೃತ್ತವಾಗುತ್ತಿದೆ. ಈ ಪ್ರದೇಶದಲ್ಲಿ ಧೂಳು ಆವರಿಸಿರುವುದರಿಂದ ಸಂಬಂಧಪಟ್ಟ ಗುತ್ತಿಗೆದಾರರು ನೀರು ಹಾಕಿ, ಧೂಳಿನಿಂದ ಸ್ಪಲ್ಪವಾದರೂ ಪರಿಹಾರ ನೀಡಿ, ಆದಷ್ಟು ಬೇಗ ಸೇತುವೆ ಅಕ್ಕ-ಪಕ್ಕ ಡಾಮರೀಕರಣ ಮಾಡಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here