ಪುತ್ತೂರು: ಸಾಯಿಕಲಾ ಯಕ್ಷಬಳಗ, ಡಾ| ಶಿವರಾಮ ಕಾರಂತ ಬಾಲವನ ಪುತ್ತೂರು, ಮಲ್ಲಿಕ ಕಲಾವೃಂದದ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವರ ಜಾತ್ರೋತ್ಸವದ ಪ್ರಯುಕ್ತ ಶಶಿಪ್ರಭಾ ಪರಿಣಯ ಯಕ್ಷಗಾನ ಕದ್ರಿ ದೇವಸ್ಥಾನದ ಆವರಣದಲ್ಲಿ ಜ.20ರಂದು ರಾತ್ರಿ ನಡೆಯಿತು.
ಮುಮ್ಮೇಳದಲ್ಲಿ ಪದ್ಮಶೇಖರನಾಗಿ ಪ್ರಚೇತ್ ಆಳ್ವ ಬಾರ್ಯ, ಮಾರ್ತಾಂಡ ತೇಜನಾಗಿ ಪ್ರೇಮಾ ಕಿಶೋರ್ ಪುತ್ತೂರು, ಕಮಲಧ್ವಜನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ಕಿರಾತ ರಾಜನಾಗಿ ಪ್ರಥ್ವಿ ಶೆಟ್ಟಿ ಕಾಟುಕುಕ್ಕೆ, ಮುದಿಯಪ್ಪಣ್ಣನಾಗಿ ಪ್ರಸಕ್ತ ರೈ ಎಸ್, ಶಶಿಪ್ರಭೆಯಾಗಿ ಆಜ್ಞಾ ಸೋಹಂ ವರ್ಕಾಡಿ, ಭ್ರಮರ ಕುಂತಳೆಯಾಗಿ ಶೃತಿ ವಿಸ್ಮಿತ್ ಗೌಡ ಬಲ್ನಾಡ್, ಕಮಲಗಂದಿನಿಯಾಗಿ ರೇಣುಕಾ ಗೌಡ, ಘೋರರೂಪಿಯಾಗಿ ಡಾ|ಅನನ್ಯ ಲಕ್ಷ್ಮೀ ಸಂದೀಪ್, ಮೇದವಿಯಾಗಿ ಜ್ಯೋತಿ ಅಶೋಕ್ ಕೆದಿಲ, ಕಾಳಿಕ ಮಾತೆಯಾಗಿ ಪ್ರಸಕ್ತಾ ರೈ ಸರೋಳಿ, ವನಪಾಲಕಿಯಾಗಿ ಪುಷ್ಪಾ ರಾಜೇಶ್ ಕುಕ್ಕಜೆ, ಕಾಳಿಮಾತೆಯಾಗಿ ದೇವಿಕ ಕುರಿಯಾಜೆ ಹಿಮ್ಮೇಳದಲ್ಲಿ ಭಾಗವತರಾಗಿ ಹೇಮ ಸ್ವಾತಿ ಕುರಿಯಾಜೆ, ಚೆಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಲಕ್ಷ್ಮೀಶ ಶಗ್ರಿತ್ತಾಯ ಪಂಜ ಮತ್ತು ಚಕ್ರತಾಳ ಗಗನ್ ಪಂಜ ನಡೆಸಿಕೊಟ್ಟರು.