





ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳ 2 ವಿಜ್ಞಾನ ಪ್ರಾಜೆಕ್ಟಗಳು ಇನ್ಸೆಫ್ ರೀಜನಲ್ ಫೇರ್ ನಡೆಸುವ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಗೆ ಆಯ್ಕೆಯಾಗಿದೆ.


ಡಿಸೆಂಬರ್ 4ರಂದು ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆರನೇ ತರಗತಿಯ ದ್ಯುತಿ ಜೆ ಎ, ಮತ್ತು ಐದನೇ ತರಗತಿಯ ಸಂಭ್ರಮ್ ಎನ್ ವಿ, ಭಾಗವಹಿಸಲಿದ್ದಾರೆ. ಇವರಿಗೆ ಸಹ ಶಿಕ್ಷಕರಾದ ಶ್ಯಾಮಲಾ ಬಂಗೇರ, ನಿವೇದಿತ ಮಾರ್ಗದರ್ಶನ ಮಾಡಿದ್ದಾರೆ. ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.







            







