ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವಗಳಿಗೆ ಜ. 22 ರಂದು ಚಾಲನೆ ದೊರೆಯಿತು.
ಜ. 22 ರಂದು ರಾತ್ರಿ ಕಾರ್ತಿಕ ಪೂಜೆ, ಅತ್ತಾಳ ಪೂಜೆ, ಗಣಪತಿ ಪ್ರಾರ್ಥನೆ ನೆರವೇರಿತು. ಜ. 23 ರಂದು ಬೆಳಿಗ್ಗೆ ತುಲಾಭಾರ ಸೇವೆ, ಬಲಿ ಉತ್ಸವ, ಸಮಾರಾಧನೆ ಜರಗಿತು.ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರ ಸಮ್ಮುಖದಲ್ಲಿ ತುಲಾಭಾರ ಸೇವೆ ಜರಗಿತು.
ಜ. 24 ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಜ. 25 ರಂದು ರಾತ್ರಿ ಶ್ರೀ ದೇವರಿಗೆ ರಂಗಪೂಜೆ ನಡೆದು ದೈವಗಳ ಕಿರುವಾಳು ಭಂಡಾರ ಆರ್ಲಪದವು ದೈವಸ್ಥಾನಕ್ಕೆ ಬಂದು ಧ್ವಜಾರೋಹಣ ನಡೆಯಲಿದೆ. ಜ. 25 ರಂದು ಮಕರ ತೋರಣ ಏರಿಸುವುದು, ಪಾಲಕ್ಕಿ ಉತ್ಸವ ನಡೆಯಲಿದೆ.
ಜ. 26 ರಂದು ಕಿನ್ನಿಮಾಣಿ ನೇಮೋತ್ಸವ, ಜ. 27 ರಂದು ಪೂಮಾಣಿ ದೈವದ ನೇಮೋತ್ಸವ ಹಾಗೂ ಜ. 28 ರಂದು ಶ್ರೀ ಮಲರಾಯ, ಪಿಲಿಭೂತ ದೈವದ ನೇಮೋತ್ಸವ ಜರಗಲಿದೆ.
‘ಸುದ್ದಿ ಲೈವ್’ ನಲ್ಲಿ ನೇರ ಪ್ರಸಾರ
ವರ್ಷಾವಧಿ ಉತ್ಸವಗಳು ‘ಸುದ್ದಿ ಲೈವ್’ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಕೇಬಲ್ ನಂ. 92 ರಲ್ಲಿಯೂ ನೇರ ಪ್ರಸಾರವಾಗಲಿದೆ.