ಜ.25ಕ್ಕೆ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಮಹಾಸತ್ಸಂಗ, ಮಹಾ ಆರತಿ

0

ಪುತ್ತೂರು: ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಜಿಲ್ಲೆಯ ವತಿಯಿಂದ ಮಹಾಸತ್ಸಂಗ ಮತ್ತು ಮಹಾ ಆರತಿಯು ಜ.25ರಂದು ಸಂಜೆ ನಡೆಯಲಿದೆ ಎಂದು ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ವಿಶ್ವಹಿಂದು ಪರಿಷತ್‌ನ 17 ಆಯಾಮಗಳಲ್ಲಿ ಒಂದಾದ ಸತ್ಸಂಗ ಪ್ರಮುಖ್ ವಿಭಾಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಪ್ರತಿಷ್ಠಾ ದಿನದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4.30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸಾವಿರದ ದೀಪಗಳ ಸಂಭ್ರಮೋತ್ಸವ ಮತ್ತು ಏಕಕಾಲದಲ್ಲಿ ಹನುಮಾನ್ ಚಾಲಿಸ್ ಪಠಣ ಮಾಡಲಾಗುವುದು. ಇದೇ ಸಂದರ್ಭ ಜಿಲ್ಲಾ ಮಠ ಮಂದಿರ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಶಶಾಂಕ ಭಟ್ ವೇಣೂರು ಅವರು ಭೌದ್ಧಿಕ್ ನೀಡಲಿದ್ದಾರೆ ಎಂದವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದು ಪರಿಷತ್‌ನ ಜಿಲ್ಲಾ ಸತ್ಸಂಗ ಸಹಪ್ರಮುಖ್ ರವಿ ಕುಮಾರ್ ಕೈತ್ತಡ್ಕ, ಶ್ರೀ ವೀರಾಂಜನೇಯ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಕಪ್ಪ ಗೌಡ, ಕ್ಷೇತ್ರದ ಅಭಿವೃದ್ಧಿ ಸಮಿತಿ ಖಜಾಂಜಿ ರೆಖಾ ನೆಲಪ್ಪಾಲು, ಮಾತೃಶಕ್ತಿ ಸಹಪ್ರಮುಖ್ ಸುಕೀರ್ತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here