ಕಡಬ ತಾಲೂಕಿಗೆ ಪ್ರಥಮ ಅಂಜನಾ ಜೇಮ್ಸ್ , ಲವ್ಯಶ್ರೀ ದ್ವಿತೀಯ, ಪ್ರಣಮ್ ಎಸ್ ದ್ವಿತೀಯ, ಶಿವಾನಿ ಡಿ ಎ ತೃತೀಯ
ಕಡಬ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸುವ ಹೈಯರ್ ಗ್ರೇಡ್ ಮತ್ತು ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಸೈಂಟ್ ಜೋಕಿಮ್ಸ್, ಸೈಂಟ್ ಆನ್ಸ್ ಪ್ರೌಢಶಾಲೆಗೆ ಶೇಕಡ 100 ಫಲಿತಾಂಶ ಬಂದಿದೆ.
ಹೈಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅಂಜನಾ ಜೇಮ್ಸ್ 491 ಅಂಕ ಪಡೆದು ಕಡಬ ತಾಲೂಕಿಗೆ ಪ್ರಥಮ, ಲವ್ಯಶ್ರೀ 475 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಶಿವಾನಿ ಡಿ ಎ 463 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ ಲೋಯರ್ ಗ್ರೇಡ್ ವಿಭಾಗದಲ್ಲಿ ಸೈಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಣಮ್ ಎಸ್ 472 ಅಂಕ ಪಡೆದು ಕಡಬ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಸೈಂಟ್ ಆನ್ಸ್ ಪ್ರೌಢಶಾಲೆ
ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 9ನೇ ತರಗತಿಯ ವಿದ್ಯಾರ್ಥಿಗಳಾದ ಸ್ಮಿತಾ ಬಿ ಎಸ್ 429, ತೇಜಸ್ವಿನಿ 423 ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಅಮೃತಾ ಪಿ ಎಸ್419, ಸೋನು 417, ಎ ಕೆ ಶಾಹಿದ್ ಯೂಸುಫ್ 410 ಯಶಸ್ ಪಿ ಡಿ 406 ಅಂಕಗಳನ್ನು ಪಡೆದಿರುತ್ತಾರೆ.
ಲೋಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 8ನೇ ತರಗತಿ ವಿದ್ಯಾರ್ಥಿಗಳಾದ ತೀಕ್ಷಾ ಎಸ್ 457, ಅವನಿ ಪಿ ಬಿ 445, ಹಿತಾ ಸಿ ಎ 439, ಕೃತಿಕಾ 438 ಎ ಧೃತಿ ರೈ 432 ತೃಷನ್ ಕೆ ಎಸ್ 428, ಪ್ರತಿಕ್ಷಾ ಬಿ ಜಿ 423, ಹಿತಾಶ್ರೀ ಪಿ. ಬಿ 422 ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ತನ್ಯಾ ಹೆಗ್ಡೆ 418, ಕಾರ್ತಿಕ್ ಪಿ 410, ಪ್ರವಿಟಾ ಸೋನಲ್ ಮಸ್ಕರೇನಸ್409 ಅಂಕಗಳನ್ನು ಪಡೆದಿರುತ್ತಾರೆ.
ಸೈಂಟ್ ಜೋಕಿಮ್ಸ್ ಪ್ರೌಢಶಾಲೆ
ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 9ನೇ ತರಗತಿ ವಿದ್ಯಾರ್ಥಿಗಳಾದ ಚೈತನ್ಯ ಪಿ 455 ,ವಂಶಿ ಬಿ ಎಂ 440, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ವರ್ಷಿತಾ 419, ಅನುಶ್ರೀ ಯನ್ 412, ಜೀಕ್ಷಿತ 402 ಅಂಕಗಳನ್ನು ಪಡೆದಿರುತ್ತಾರೆ.
ಲೋಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 8ನೇ ತರಗತಿಯ ವಿದ್ಯಾರ್ಥಿಗಳಾದ ಮರಿಯಮತ್ ರಾಫಿಯ 421, ಎ ಧನ್ವಿ ರೈ 420, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ, ಎ ಚೈತ್ರೇಶ್ ರೈ 410 ಸುದೀಕ್ಷಾ 403, ಪೂರ್ವಿ 402. ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ತರಬೇತಿಯನ್ನು ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ನೀಡಿರುತ್ತಾರೆ.