ಪುತ್ತೂರು: ತಾಲೂಕು ಪಂಚಾಯತ್ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ನಮ್ಮ ಸಂಸ್ಕೃತಿ ಸ್ವಚ್ಚ ಸಂಸ್ಕೃತಿ ಸ್ವಚ್ಛ ಬನ್ನೂರು ಎಂಬ ಧ್ಯೇಯ ವಾಕ್ಯದೊಂದಿಗಿನ ಬನ್ನೂರು ಗ್ರಾ.ಪಂನಿಂದ ಬೃಹತ್ ಸ್ವಚ್ಛತಾ ಅಭಿಯಾನ ನಡೆಸಿದರು.
ಜ.22ರಂದು ಬನ್ನೂರು ಗ್ರಾಮ ಪಂಚಾಯತ್ ಕಚೇರಿ ಬಳಿ, ಜ.23೩ರಂದು ಚಿಕ್ಕ ಮುಡ್ನೂರು ಗ್ರಾಮದ ಬೀರ್ನಹಿತ್ಲು ವ್ಯಾಪ್ತಿಯಲ್ಲಿ ಹಾಗೂ ಜ.24 ಬನ್ನೂರು ಗ್ರಾಮದ ದೇವಿನಗರದಿಂದ ಕಜೆ ಜಂಕ್ಷನ್ ವರೆಗೆ ನಡೆಯಿತು.
ಶ್ರಮದಾನ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಎ. ರಾಜೇಶ್ ರೈ, ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಎನ್, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ತಿಮ್ಮಪ್ಪ ಪೂಜಾರಿ, ಜಯ ಎ., ರಾಘವೇಂದ್ರ, ಮಾಜಿ ಸದಸ್ಯ ಅಣ್ಣಿ ಪೂಜಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರಾದ ಕನಿಷ್ಕ ಎಸ್, ಪ್ರಮೋದ್ ಕುಮಾರ್ ಕೆ. ಕಿರಿಯ ಅಭಿಯಂತರ ಎಲ್.ಸಿ. ಸಿಕ್ವೇರ, ಸಿಬಂದಿಗಳಾದ ರಾಜೇಶ್, ಪುನೀತ್, ಸಂಜೀವ, ಬಿ. ವಾಸು ನಾಯ್ಕ, ಕಾರ್ತಿಕ್, ಸಂದೇಶ್ ಕೆ.ಎಚ್, ರಕ್ಷಿತಾ, ಗ್ರಾ.ಪಂ ಪಿಡಿಓ ಚಿತ್ರಾವತಿ, ಲೆಕ್ಕ ಸಹಾಯಕಿ ಜಯಂತಿ ಸಿಬಂದಿಗಳು, ಸ್ವಚ್ಛತಾ ಸೇನಾನಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಸದಸ್ಯರುಗಳು, ಬೀರ್ನಹಿತ್ಲು ಶಾಲಾ ಶಿಕ್ಷಕರು, ಎಂಬಿಕೆ, ವಿಆರ್ಡಬ್ಲ್ಯುಗಳು ಹಾಗೂ ಗ್ರಾಮಸ್ಥರು ಸ್ವಚ್ಚತೆಯಲ್ಲಿ ಸಹಕರಿಸಿದರು.