ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ 76ನೇ ಗಣರಾಜ್ಯೋತ್ಸವದ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಕಾಲೇಜಿನ ಹಿರಿಯ ಉಪನ್ಯಾಸಕ ವಸಂತ ಕುಮಾರ್ ಡಿ ನೆರವೇರಿಸಿದರು.
ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಅವರು ಮಾತನಾಡಿ ” ಸುಮಾರು 75 ವರ್ಷಗಳ ಹಿಂದೆ ಈ ದಿವಸ ನಮ್ಮ ದೇಶ ಸಂವಿಧಾನವನ್ನ ಅಂಗೀಕರಿಸಿಕೊಂಡಿತು. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ದೇಶದ ಆಡಳಿತ ಚೆನ್ನಾಗಿ ನಡೆಯಬೇಕಾದರೆ ಸಂವಿಧಾನವೇ ದಾರಿದೀಪವಾಗಿದೆ. ಇಂತಹ ಶ್ರೇಷ್ಠ ಸಂವಿಧಾನದ ಪ್ರಕಾರವಾಗಿ ಎಂದೆಂದಿಗೂ ನಡೆಯುವ ಗುಣ ನಮ್ಮಲ್ಲಿ ನೆಲೆಸಲಿ” ಎಂದು ಹೇಳಿದರು. ಹಿರಿಯ ಉಪನ್ಯಾಸಕ ದಿನೇಶ್ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ವಿದ್ಯಾರ್ಥಿನಿಯರಾದ ಶ್ರದ್ಧಾ ಮತ್ತು ಬಳಗದವರು ಧ್ವಜ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಕೆ ಮತ್ತು ದೈಹಿಕ ಶಿಕ್ಷಕಿ ಪ್ರಫುಲ್ಲಾ ರೈ ಸಹಕರಿಸಿದರು.