ನಾಳೆ(ಜ.28) ಧಾರ್ಮಿಕ ಶಿಕ್ಷಣ ಯೋಜನೆ ಅನುಷ್ಠಾನ, ಕೆಯ್ಯೂರು ದೇವಳದ ವಠಾರದಲ್ಲಿ ಸಭೆ

0

ಪುತ್ತೂರು: ಶೃಂಗೇರಿ ಪೀಠದ ಈ ಹಿಂದೂ ಧಾರ್ಮಿಕ ಶಿಕ್ಷಣದ ಯೋಜನೆ ಅನುಷ್ಠಾನ ಬಗ್ಗೆ ಈಗಾಗಲೇ ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜ ಅವರ ಉಸ್ತುವಾರಿಯಲ್ಲಿ ತಾಲೂಕು ಸಮಿತಿ ರಚನೆ ಗೊಂಡಿದ್ದು, ಅದಕ್ಕೆ ಪೂರಕವಾಗಿ ಗ್ರಾಮಾಂತರ ಸಮಿತಿ ರಚನೆಗೆ ನಿರ್ದೇಶನ ನೀಡಿರುವಂತೆ ಜ.28 ರಂದು ಪೂರ್ವಾಹ್ನ 10ಕ್ಕೆ ಕೆಯ್ಯೂರು ದೇವಸ್ಥಾನ ವಠಾರದಲ್ಲಿ ಕೆಯ್ಯೂರು ಗ್ರಾಮದ ಹಿಂದೂ ಗಳನ್ನು ಸೇರಿಸಲು ತಾಲೂಕು ಸಮಿತಿಯ ಸಂಚಾಲಕರಾದ ದಂಬೆಕ್ಕಾನ ಸದಾಶಿವ ರೈ ಅವರ ಮಾರ್ಗದರ್ಶನದಲ್ಲಿ ಗ್ರಾಮದ ಐದು ವಾರ್ಡ್ ಗಳಿಗೆ ಯೋಜನೆಯ ಉದ್ದೇಶದ ಕರಪತ್ರ ವಿತರಿಸಲಾಯಿತು.

ಅಂತೆಯೇ ಈ ಬಗ್ಗೆ ಮುಂದಕ್ಕೆ ಯೋಜನೆ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವಂತೆ , ಸ್ವತಃ ತಾಲೂಕು ಸಂಚಾಲಕರಾದ ದಂಬೆಕ್ಕಾನ ಸದಾಶಿವ ರೈ ಅವರು ಶ್ರೀ ಕ್ಷೇತ್ರ ಕೆಯ್ಯೂರಿನ ಮಾಜಿ ಆಡಳಿತ ಮೊಕ್ತೇಸರರ ಮನೆಗಳಿಗೆ ಭೇಟಿ ನೀಡಿ ಸಮಿತಿ ರಚನೆಯ ಸಭೆಗೆ ಆಹ್ವಾನಿಸಿದರು.

LEAVE A REPLY

Please enter your comment!
Please enter your name here