ಕೆಯ್ಯೂರು: ಮದುವೆ ಸಮಾರಂಭದ ತ್ಯಾಜ್ಯ ಎಸೆತ:ಸ್ಥಳಕ್ಕೆ ತಾ.ಪಂ ಇಓ, ಗ್ರಾ.ಪಂ ಅಧ್ಯಕ್ಷರ ಭೇಟಿ, ದಂಡ ವಿಧಿಸಲು ಸೂಚನೆ 

0

ಪುತ್ತೂರು: ಮದುವೆ ಸಮಾರಂಭದ ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶದಲ್ಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ತಾಪಂ ಇಓ ನವೀನ್ ಭಂಡಾರಿ, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆರವರು ಭೇಟಿ ನೀಡಿ ಪರಿಶೀಲನೆ ನಡೆಸಿ ದಂಡ ವಿಧಿಸಲು ಸೂಚನೆ ನೀಡಿದ್ದಾರೆ.

ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಗುಡ್ಡೆ ಎಂಬಲ್ಲಿ ಮದುವೆ ಸಮಾರಂಭದ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿದ್ದು, ಅಲ್ಲದೆ ಅವರಿಂದಲೇ ಹಸಿ ಕಸ ಒಣ ಕಸ  ಪ್ರತ್ಯೇಕ ಪ್ರತ್ಯೇಕವಾಗಿ ನೀಡಲು ಸೂಚಿಸಲಾಯಿತು. ಕಾರ್ಯಚಾರಣೆಯಲ್ಲಿ ಪಂಚಾಯತ್ ಅಧ್ಯಕ್ಷ ಕೆ ಶರತ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ, ಕಾರ್ಯದರ್ಶಿ ಸುರೇಂದ್ರ ರೈ, ಸದಸ್ಯರಾದ ಜಯಂತ್ ಕೆಂಗುಡೇಳು, ಅಬ್ದುಲ್ ಖಾದರ್, ತಾರಾನಾಥ್ ಕಂಪ, ವಿಜಯ ಸಣಂಗಳ, ಮಮತಾ, ನೆಬಿಸ, ಜಯಂತಿ ಎಸ್ ಭಂಡಾರಿ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ದಂಡ ವಿಧಿಸುವಂತೆ ಸೂಚಿಸಿದರು.

” ಗ್ರಾಮವನ್ನು ಸ್ವಚ್ಚ ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ಯಾರು ಕೂಡ ಕಸ ತ್ಯಾಜ್ಯ ಹಾಕಬಾರದು. ಹಾಕಿದ್ದು ಕಂಡು ಬಂದರೆ ದಂಡದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು.”
– ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here