ಸಹೃದಯರಲ್ಲಿ ವಿನಂತಿ
ಈ ಫೊಟೋದಲ್ಲಿರುವವರು ವರ್ಕಾಡಿ ಗ್ರಾಮ ಪಂಚಾಯತ್ ಪಾತೂರು ದೈಲ ನಿವಾಸಿ ಮಾಡಲು ದಿನೇಶ್ ಅಡಪ (43 ವರ್ಷ). ಇವರು 15 ವರ್ಷಗಳಿಂದ ಮಧುದೇಹ ಕಾಯಿಲೆಯಿಂದ ಬಳಲುತ್ತಿದ್ದು, ಪ್ರಸ್ತುತ ಎರಡೂ ಕಿಡ್ನಿಗಳು ವೈಫಲ್ಯಗೊಂಡು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಹುಟ್ಟು ವಿಕಲಚೇತನರಾಗಿರುವ ಶ್ರೀಯುತರಿಗೆ ತಮ್ಮ ವೈಯಕ್ತಿಕ ಕಾರ್ಯ ನಡೆಸುವುದೇ ಕಷ್ಟವಾಗಿದೆ. ಸರಿಯಾಗಿ ನಡೆದಾಡಲು ಮತ್ತು ಉದ್ಯೋಗ ಸಾಧ್ಯವಿಲ್ಲದೆ, ಪತ್ನಿ ಹಾಗೂ ಈರ್ವರು ಪುಟ್ಟ ಮಕ್ಕಳ ಜೊತೆ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದಾರೆ.
ಜನವರಿ 30 ರಂದು ಪಿತ್ತಕೋಶದಲ್ಲಿರುವ ಕಲ್ಲು ತೆಗೆಯಲು ಪುತ್ತೂರಿನ ಪ್ರಗತಿ ಆಸ್ಪತ್ರೆಯ ವೈದ್ಯರು ಆಪರೇಷನ್ ಗೆ ಸಲಹೆ ನೀಡಿದ್ದಾರೆ. ಲಕ್ಷಕ್ಕಿಂತಲೂ ಅಧಿಕ ಖರ್ಚು ತಗುಲುವ ಚಿಕಿತ್ಸೆಗೆ ಈಗ ಅವರ ಕುಟುಂಬ ಅಸಹಾಯಕತೆಯ ನೋಟ ಚೆಲ್ಲಿದೆ. ಸಮಾಜದ ಸಹೃದಯರಿಂದ ಸಹಾಯವನ್ನು ಯಾಚಿಸುತ್ತಿದ್ದಾರೆ..
ತಮ್ಮ ಒಳ್ಳೆಯ ಮನಸಿನ ಸ್ಪಂದನೆಯಿಂದ ಒಂದು ಅಮೂಲ್ಯ ಜೀವ ಉಳಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಮಹತ್ಕಾರ್ಯವಿಲ್ಲ. ಉದಾರ ಮನಸ್ಕರಾದ ತಾವು ಧನ ಸಹಾಯ ನೀಡಲು ಪ್ರೀತಿಪೂರ್ವಕ ವಿನಂತಿ. ಸಹಾಯ ಮಾಡ ಬಯಸುವವರು ಈ ಕೆಳಗಿನ ಗೂಗಲ್ ಪೇ ಅಥವಾ ಬ್ಯಾಂಕ್ ಖಾತೆ ನಂಬರ್ ಗೆ ಹಣ ವರ್ಗಾಯಿಸಲು
ವಿನಂತಿ. ಹೆಚ್ಚಿನ ಮಾಹಿತಿಗೆ ಅವರ ಮನೆಯವರನ್ನು ಸಂಪರ್ಕಿಸಬಹುದಾಗಿದೆ. Mob- 9074885426