ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ “AURORA 2025, THE NEW BEGINNING” ಕಾರ್ಯಕ್ರಮ

0

ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ಸಂಸ್ಥೆಯಾದ ಸ್ಕೈ ಬರ್ಡ್ ಏವಿಯೇಷನ್‌ನ ಅಧಿಕೃತ ಫ್ರಾಂಚೈಸಿ ಸಂಸ್ಥೆಯಾಗಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜೆಮೆಂಟ್‌ನಲ್ಲಿ ಫ್ರೆಷರ‍್ಸ್ ಡೇ ವಿಜ್ರಂಭಣೆಯಿಂದ ಮಹಾವೀರ ಮಾಲ್ ಬೊಳ್ವಾರ್ ಸಭಾಂಗಣದಲ್ಲಿ ಜ.28ರಂದು ನಡೆಯಿತು.

ಶ್ರೀ ಪ್ರಗತಿ ಏಜುಕೇಶನ್ ಫೌಂಡೇಶನ್ ಮೂಡಬಿದ್ರೆ ಇದರ ಅಧ್ಯಕ್ಷೆ ಹೇಮಾವತಿ ಸುದರ್ಶನ್ ಇವರು ದೀಪ ಪ್ರಜ್ವಲನೆ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ Sky bird ಏವಿಯೇಷನ್‌ನ Manging Director ಮತ್ತು ಅಧ್ಯಕ್ಷರಾದ ಸುಜಾತ ಬೈರಿ, ಪ್ರಾಂಶುಪಾಲರಾದ ಕೆಂಪರಾಜು, ಜಯರಾಮ್ ಮನೈ ಮಾಲಕರು ಮಾನೈ ಆಚ್ರ್, ಸಂಸ್ಥೆಯ ಉಪಾಧ್ಯಕ್ಷರು ಹೇಮಲತಾ ಗೋಕುಲ್‌ನಾಥ್, ಕಾರ್ಯದರ್ಶಿಯಾದ ಗೋಕುಲ್‌ನಾಥ್ ಪಿ.ವಿ., ಖಜಾಂಜಿ ಸುದರ್ಶನ್ ಮೂಡಬಿದ್ರೆ
ಹಾಗೂ ಆಡಳಿತಾಧಿಕಾರಿ ಸ್ನಿಗ್ಧ ಆಳ್ವ ಉಪಸ್ಥಿತರಿದ್ದರು.


“ದೊಡ್ಡ ಕನಸು ಕಂಡಾಗ ಮಾತ್ರ ಉನ್ನತ ಹುದ್ದೆಗೆ ಹೋಗಲು ಸಾಧ್ಯ”
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಸ್ಕೈ ಬರ್ಡ್ ಏವಿಯೇಷನ್‌ನ ಅಧ್ಯಕ್ಷೆ ಸುಜಾತ ಬೈರಿ ಮಾತನಾಡಿ, ಸ್ಕೈ ಬರ್ಡ್ ವಿಮಾನಯಾನ ಸಂಸ್ಥೆಯು ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡುತ್ತಿದ್ದು, ವಿಮಾನಯಾನದ ಕನಸನ್ನು ನನಸುಮಾಡುವ ಮಹತ್ತರ ಪಾತ್ರವಹಿಸಿದೆ. ವಿಮಾನಯಾನದ ಮಹತ್ವ, ವ್ಯಾಪ್ತಿ, ಉದ್ಯೋಗವಕಾಶ, ವ್ಯಕ್ತಿತ್ವ ವಿಕಸನಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು ಹಾಗು ನೂತನ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.


“ಇದು ಕೇವಲ ಆರಂಭ ಮಾತ್ರವಲ್ಲ, ಯಶಸ್ವಿನ ದಾರಿಯಲ್ಲಿದೆ”.
ಪ್ರಾಂಶುಪಾಲ ಕೆಂಪರಾಜು ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಬೇಕು ಮಾತ್ರವಲ್ಲದೆ ಸ್ಕೈ ಬರ್ಡ್‌ನ ನೀತಿ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ವಿದ್ಯಾರ್ಥಿಗಳನ್ನು ತಮ್ಮ ಹಿತನುಡಿಗಳ ಮೂಲಕ ವ್ಯಕ್ತಿಪರ ವೈಚಾರಿಕ ಅಂಶಗಳನ್ನು ನೀಡಿದರು.

“ಪ್ರಗತಿ ಸ್ಟಡಿ ಸೆಂಟರ್‌ನ ಸಂಪರ್ಕದಿಂದ ಮತ್ತು ಪ್ರೇರಣೆಯಿಂದ ಪ್ರಗತಿ ವಿಸ್ತಾರ ಪ್ರಾರಂಭ”
ನಂತರದ ಭಾಗವಾಗಿ ಸಂಸ್ಥೆಯ ಖಜಾಂಜಿ ಸುದರ್ಶನ್ ಮೂಡಬಿದ್ರೆ ಮಾತನಾಡಿ, ನೂತನ ವಿದ್ಯಾರ್ಥಿಗಳಿಗೆ ಶ್ರಮ ಮತ್ತು ದೃಢ ನಿರ್ಧಾರದ ಸಂಕಲ್ಪವು ಕಲಿಕೆಯ ಬೆಳವಣಿಗೆಗೆ ಸಕಾರಾತ್ಮಕವಾಗಿ ದಾರಿಮಾಡಿಕೊಡುತ್ತದೆ. ಮಾತ್ರವಲ್ಲದೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳನ್ನು ಸದುಪಯೋಗಿಸಬೇಕು ಮತ್ತು ತಮ್ಮ ವ್ಯಕ್ತಿತ್ವವನ್ನು ವಿಕಾಸನದೆಡೆಗೆ ಕೊಂಡೊಯ್ದು ಭವಿಷ್ಯವು ಉಜ್ವಲಗೊಳಿಸಲಿ ಎಂದರು.


“ಶಿಷ್ಟಾಚಾರ ಮತ್ತು ಪ್ರಾಮಾಣಿಕತೆ ಕಲಿಕೆಯ ಪ್ರಗತಿಯ ಭಾಗ”
ಸಂಸ್ಥೆಯ ಕಾರ್ಯದರ್ಶಿ ಗೋಕುಲ್‌ನಾಥ್ ಪಿ.ವಿ. ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು, ಶಿಷ್ಟಾಚಾರ, ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಕೆಯು ಪ್ರಗತಿಗೆ ಸಹಾಯವಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿವಿಧ ರೀತಿಯ ಮನೋರಂಜನಾ ಸ್ಪರ್ಧೆಗಳು:-
ಸಂಸ್ಥೆಯ ಸಿಬ್ಬಂಧಿಗಳಿಂದ ನೂತನ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಅಯೋಜಿಸಿದ್ದರು.

ಗಮನಸೆಳೆದ RAMP WALK ಸ್ಪರ್ಧೆ:-
ಸಂಸ್ಥೆಯು ನೂತನ ವಿದ್ಯಾರ್ಥಿಗಳಿಗೆ RAMP WALK ಸ್ಪರ್ಧೆಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ವಿವಿಧ ಶೈಲಿಯ ಉಡುಗೆ ತೊಡುಗೆಗಳನ್ನು ಧರಿಸಿ ಪ್ರೇಕ್ಷಕರ ಗಮನ ಸೆಳೆದರು. ಸ್ಪರ್ಧೆಗೆ ತೀರ್ಪುಗಾರರಾಗಿ ಸ್ನಿಗ್ಧ ಆಳ್ವ, ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಏವಿಯೇಷನ್ ತರಬೇತಿದಾರ ಅರುಣ್ ಜೋಶ್ ಉಪಸ್ಥಿತರಿದ್ದರು.


ಸ್ಪರ್ಧೆಯಲ್ಲಿ ಮಿಸ್ಟರ್ ಫ್ರಶರ್ ಬಿರುದನ್ನು ಮಹಮ್ಮದ್ ಝಾಹಿದ್ ,ಮಿಸ್ ಫ್ರಶರ್ ಬಿರುದನ್ನು ಪ್ರವೀಕ್ಷ ಅಲಂಕರಿಸಿದರು ಮತ್ತು ತರಗತಿಯ ಆರಂಭದಿಂದ ಕಲಿಕೆ ಮತ್ತು ಕಲಿಕೇತರ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡ ಮಹಮ್ಮದ್ ರಿಹಾಮ್ ರೈಸಿಂಗ್ ಸ್ಟಾರ್ ಬಿರುದನ್ನು ಪಡೆದುಕೊಂಡರು. ವಿಜೇತರಿಗೆ ಸ್ಕೈ ಬರ್ಡ್ ಏವಿಯೇಷನ್‌ನ ಅಧ್ಯಕ್ಷೆ ಸುಜಾತ ಬೈರಿ ಮತ್ತು ಗಣ್ಯರು ಬಿರುದು ಮತ್ತು ಬಹುಮಾನವನ್ನು ನೀಡುವ ಮೂಲಕ ಅಭಿನಂದಿಸಿದರು.

ಸಾಂಸ್ಕೃತಿಕ ಕಲರವ:-
ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೂಕಭಿನಯ,ಕೊಡವ ನೃತ್ಯ(ವಾಲ್ಗ), ಸೆಮಿ ಕ್ಲಾಸಿಕಲ್ ನೃತ್ಯ, ಹಾಸ್ಯಮಯ ನೃತ್ಯ(Funny Dance),Solo Dance ಸಾಮೂಹಿಕ ನೃತ್ಯವು ಎಲ್ಲರ ಮನಗೆದ್ದಿತು. ವಿದ್ಯಾರ್ಥಿನಿ ಪ್ರವಿಕ್ಷಾ ತನ್ನ ಅನುಭವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ Aviation Trainee ಅರುಣ್ ಜೋಶ್ ಮತ್ತು Administrative Officer ಸ್ನಿಗ್ಧ ಆಳ್ವ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ದಿವ್ಯ ಸ್ವಾಗತಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ವರ್ಷಿತ, ಅಪಿದ, ಶಂಶೀರ ಪ್ರಾರ್ಥಿಸಿದರು. ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸಂಸ್ಥೆಯ ಸಿಬ್ಬಂದಿ ಚೈತ್ರ, ಸಂಸ್ಥೆಯ ಸಿಬ್ಬಂದಿಯಾದ ಪೂಜಾ ವಂದಿಸಿದರು.ಸಂಸ್ಥೆಯ ಉಪನ್ಯಾಸಕ ಅಬ್ದುಲ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಜಯಶ್ರೀ, ಕಲಾವತಿ, ಪೂಜಾ, ದಿವ್ಯ, ಚೈತ್ರ, ಸ್ನಿಗ್ಧ ಆಳ್ವ, ಅರುಣ್ ಜೋಶ್, ಅಬ್ದುಲ್ ನಾಸಿರ್ ಹಾಗೂ ಶೃತಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here