




ಪುತ್ತೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ದ.ಕ.ಜಿಲ್ಲಾ ಯುವ ಸಂಘಗಳ ಒಕ್ಕೂಟ ಮಂಗಳೂರು ಇವರ ಆಶ್ರಯದಲ್ಲಿ ಸವಣೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಜನಪದ ನೃತ್ಯ ಸ್ವರ್ಧೆ ಕಲಾ ವೈಭವ, ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ರವರ ನೇತೃತ್ವದಲ್ಲಿ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿ, ಗೌರವಿಸಿದರು.



ಶಾಸಕಿ ಭಾಗಿರಥಿ ಮುರುಳ್ಯ, ಪ್ರಮುಖರಾದ ದಿನೇಶ್ ಮೆದು, ತಾರಾನಾಥ ಕಾಯರ್ಗ, ಸುಂದರಿ ಬಂಬಿಲ, ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ರೈ ಮೈಲೇರಿ, ಜಿತಾಕ್ಷಿ ಜಿ. ಕುದ್ಮಾರು, ಸಚಿನ್ ಸವಣೂರು, ಸತೀಶ್ ಬಲ್ಯಾಯ, ಆಶ್ರಫ್ ಜನತಾ, ನಿಂಗರಾಜು, ಒಕ್ಕೂಟದ ರಾಜ್ಯಾಧ್ಯಕ್ಷ ಬಾಲಾಜಿ ಬೆಂಗಳೂರು ಉಪಸ್ಥಿತರಿದ್ದರು.





ಚಿತ್ರ: ಎಸ್.ಕೆ. ಡಿಜಿಟಲ್ ಭಕ್ತಕೋಡಿ









