ನಿಡ್ಪಳ್ಳಿ; ಇಲ್ಲಿಯ ಗ್ರಾಮ ಪಂಚಾಯತ್ ವಿಶೇಷ ಚೇತನರ 2024-25 ನೇ ಸಾಲಿನ ಗ್ರಾಮಸಭೆ ಜ. 30 ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ತಾಲೂಕು ಪಂಚಾಯತ್ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಯೋಜನೆಗಳ , ವಿಕಲ ಚೇತನರಿಗೆ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುವ ಬಗ್ಗೆ, ವಿಕಲಚೇತನರಿಗೆ 2016ರ ಅದಿನಿಯಮ ಕಾಯ್ದೆ ಪ್ರಕಾರ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯಬೇಕು. ವಿಕಲ ಚೇತನರ 21ವಿಧದ ವಿಕಲತೆಯ ಬಗ್ಗೆ ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತೆಯ ಕುರಿತು ಪುತ್ತೂರು ಶಾಖೆಯ ಗೀತಾ ವಿಜಯ್ ರವರು ವಿಕಲ ಚೇತನರಿಗೆ ಬ್ಯಾಂಕಿನ ಆರೋಗ್ಯ ವಿಮೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಪಾಣಾಜೆ ಅರೋಗ್ಯ ಸುರಕ್ಷತಾ ಅಧಿಕಾರಿ ಕುಸುಮಾವತಿ, ಎಂಡೋ ಪೀಡಿತರ ಆರೋಗ್ಯ ಹಾಗೂ ವಿಕಲ ಚೇತನರ ಆರೋಗ್ಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ನಿಡ್ಪಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಲಕ್ಷ್ಮಿ ವಿಕಲ ಚೇತನರ ಹಾಗೂ ಎಂಡೋ ಪೀಡಿತರ ಆರೋಗ್ಯ ಕಾರ್ಯಕ್ರಮದ ಆರೋಗ್ಯ ತಪಾಸಣೆ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಸದಸ್ಯೆ ಗೀತಾ.ಡಿ, ನಿಡ್ಪಳ್ಳಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಾಮ, ವಿಕಲಚೇತನರು, ,ವಿಕಲಚೇತನರ ಪೋಷಕರು ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸಹಾಯಕರು , ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.