ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜ.31 ರಂದು ಸಂಜೆ 6ರಿಂದ ರಾತ್ರಿ 7.30ರ ವರೆಗೆ ಮಕ್ಕಳಿಗೆ “ನಕ್ಷತ್ರ ಮತ್ತು ಗ್ರಹಗಳ ವೀಕ್ಷಣೆ”ಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮೂಡಂಬೈಲು ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಅವರು ಮಕ್ಕಳಿಗೆ ಗ್ರಹಗಳಿಗೂ ನಕ್ಷತ್ರಗಳಿಗೂ ಇರುವ ವ್ಯತ್ಯಾಸ, ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳ ಬಗ್ಗೆ ಪಿ.ಪಿ.ಟಿ ಮೂಲಕ ಸವಿಸ್ತಾರವಾಗಿ ತಿಳಿಸಿದರು. ನಂತರ ಟೆಲಿಸ್ಕೋಪಿನ ಸಹಾಯದಿಂದ ನಕ್ಷತ್ರ ಪುಂಜಗಳು ಮತ್ತು ಉತ್ತರ ದಿಕ್ಕನ್ನು ಕಂಡುಹಿಡಿಯುವ ರೀತಿಯನ್ನು ಸವಿವರವಾಗಿ ತಿಳಿಸಿಕೊಟ್ಟರು. ತದನಂತರ ಎಲ್ಲರೂ ಟೆಲಿಸ್ಕೋಪಿನ ಮೂಲಕ ನಕ್ಷತ್ರ ಮತ್ತು ಗ್ರಹಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಭರತ್ ಪೈ, ಶಾಲಾ ಪ್ರಾಂಶುಪಾಲ ಸಿಂಧು ವಿ.ಜಿ , ಶಿಕ್ಷಕ ನವೀನ್ ಕುಮಾರ್, ಶಿಕ್ಷಕಿ ಲತಾ ಶಂಕರಿ, ಸ್ವಾತಿ, ಪ್ರಿಯದರ್ಶಿನಿ, ಅಪೂರ್ವ ಹಾಗೂ ಸಿಬ್ಬಂದಿ ಗಣೇಶ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಗೈಡ್ ಕ್ಯಾಪ್ಟನ್ ಪ್ರಫುಲ್ಲ. ಕೆ ನಡೆಸಿಕೊಟ್ಟರು.