ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಚುನಾವಣೆ : 10 ಮಂದಿ ನಿರ್ದೇಶಕರ ಆಯ್ಕೆ

0

ಪುತ್ತೂರು: ಕೋರ್ಟ್‌ರಸ್ತೆ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು ಹತ್ತು ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ 20 ಮಂದಿ ಆಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ಸ್ಥಾನದಲ್ಲಿ ಏಳು ಮಂದಿಯ ಆಯ್ಕೆಯಾಗಬೇಕಿದ್ದು ಇದರಲ್ಲಿ ರಾಕೇಶ್ ಜೋಯ್ಸನ್ ಮಸ್ಕರೇನ್ಹಸ್, ರೋಯಿಸ್ಟನ್ ಡಾಯಸ್, ಪವನ್ ಜೋನ್ ಮಸ್ಕರೇನ್ಹಸ್, ವಿಜಯ್ ವಿಲ್ರೆಡ್ ಡಿ’ಸೋಜ, ಲೆಸ್ಟರ್ ಪಿಂಟೊ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಮೌರಿಸ್ ಮಸ್ಕರೇನ್ಹಸ್‌ರವರು ಆಯ್ಕೆಯಾಗಿದ್ದಾರೆ.

ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ವಿಭಾಗದಲ್ಲಿ ಒಂದು ಸ್ಥಾನದ ಆಯ್ಕೆಯಾಗಬೇಕಿದ್ದು ಇದರಲ್ಲಿ ಸುನಿಲ್ ಶೈಲೇಶ್ ಮಸ್ಕರೇನ್ಹಸ್, ಮಹಿಳಾ ಮೀಸಲು ವಿಭಾಗದಲ್ಲಿ ಎರಡು ಸ್ಥಾನಗಳ ಆಯ್ಕೆಯಾಗಬೇಕಿದ್ದು ಇದರಲ್ಲಿ ಹಿಲ್ಡಾ ಮಿನೇಜಸ್, ಶೈನಿ ಎನ್.ಎಸ್‌ರವರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾನದಲ್ಲಿ ಅರುಣ್ ಸೆಬಾಸ್ಟಿಯನ್ ರೆಬೆಲ್ಲೋ, ಮೆಲ್ವಿನ್ ಫೆರ್ನಾಂಡೀಸ್, ಲ್ಯಾನ್ಸಿ ಮಸ್ಕರೇನ್ಹಸ್, ವಾಲ್ಟರ್ ಡಿ’ಸೋಜ, ವಿನಿಲ್ ರೋಹನ್ ಡಿ’ಸೋಜ, ವಿನ್ಸೆಂಟ್ ತಾವ್ರೋ, ಸಿಲ್ವೆಸ್ಟರ್ ಡಿ’ಸೋಜ, ಹೆರಾನ್ ಕುಟಿನ್ಹಾ, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ವಿಭಾಗದಲ್ಲಿ ಸೈಮನ್ ಗೊನ್ಸಾಲ್ವಿಸ್, ಮಹಿಳಾ ಮೀಸಲು ಸ್ಥಾನದಲ್ಲಿ ಬಾಬ್ಬಿ ಮಾಗ್ದೆಲಿನ್ ಡಿಕ್ರೋಜ್‌ರವರು ಸ್ಪರ್ಧಿಸಿದ್ದರು.


ಒಟ್ಟು 316 ಮತದಾರರಿದ್ದು ಇದರಲ್ಲಿ 245 ಮತಗಳು ಚಲಾವಣೆಯಾಗಿವೆ. ಸಾಮಾನ್ಯ ಸ್ಥಾನದಲ್ಲಿ 16, ಹಿಂದುಳಿದ ಪ್ರವರ್ಗ ‘ಬಿ’ಯಲ್ಲಿ 8, ಮಹಿಳಾ ಸ್ಥಾನದಲ್ಲಿ 4 ಅಸಿಂಧು ಮತಗಳಾಗಿವೆ. 2000ರಲ್ಲಿ ಆರಂಭವಾದ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಯು ಪುತ್ತೂರು ತಾಲೂಕು ವ್ಯಾಪ್ತಿಯನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಶೋಭಾ ಎನ್.ಎಸ್. ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here