ಕಡಬ: ಮರ್ದಾಳ ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 10 ಲಕ್ಷ ರೂಪಾಯಿ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಭಟ್ ಪಿಲಿ ಮಜಲು, ಉಪಾಧ್ಯಕ್ಷ ನಾರಾಯಣ ಶೆಟ್ಟಿ ಆತ್ಯಡ್ಕ, ಸದಸ್ಯರಾದ ಉಮೇಶ್ ಬ್ರಹ್ಮಶ್ರೀ ಮತ್ತು ಕ್ಷೇತ್ರದ ಹಿರಿಯರಾದ ಶ್ರೀನಿವಾಸ ರೈ ಮುಂಡ್ರಾಡಿ, ಶ್ಯಾಮ್ ಪ್ರಸಾದ ರೈ ಪಣೆಬೈಲು ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸತ್ಯನಾರಾಯಣ ಹೆಗ್ಡೆ ನಡುಮಜಲು ಉಪಸ್ಥಿತರಿದ್ದರು.