ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ನ 2024-25ನೇ ಸಾಲಿನ ವಿಶೇಷ ಚೇತನರ ಗ್ರಾಮಸಭೆ ಕಾವು ಸುವರ್ಣಸೌಧ ಸಮುದಾಯ ಭವನದಲ್ಲಿ ಅಧ್ಯಕ್ಷ ಸಂತೋಷ್ ಮಣಿಯಾಣಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ತಾಲೂಕು ಮಟ್ಟದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು. ವಿಕಲಚೇತನರಿಗೆ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುವ ಬಗ್ಗೆ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆಯ ಪುತ್ತೂರು ಶಾಖೆಯ ಗೀತಾ ವಿಜಯ್ ವಿಕಲಚೇತನರಿಗೆ ಬ್ಯಾಂಕಿನ ಆರೋಗ್ಯ ವಿಮೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಮೀನಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಎಚ್. ಹಾಗೂ ಕಾರ್ಯದರ್ಶಿ ಶಿವರಾಮ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರೋಗ್ಯ ಕೇಂದ್ರದ ವತಿಯಿಂದ ವಿಕಲಚೇತನ ವ್ಯಕ್ತಿಗಳಿಗೆ ಹಾಗೂ ಎಂಡೋಪೀಡಿತರಿಗೆ ಅರೋಗ್ಯ ತಪಾಸಣೆ ನಡೆಯಿತು. ಅರಿಯಡ್ಕ ಗ್ರಾಮೀಣಪುನರ್ವಸತಿ ಕಾರ್ಯಕರ್ತ ಮಲ್ಲ ಎಂ., ಗ್ರಾಮ ಪಂಚಾಯತ್ ಸದಸ್ಯರು, ವಿಕಲಚೇತನರು/ವಿಕಲಚೇತನರ ಆರೈಕೆದಾರರು, ಆಶಾಕಾರ್ಯಕರ್ತರು, ಅರೋಗ್ಯ ಕೇಂದ್ರ ಹಿರಿಯ ಅರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.