*ತರಬೇತಿಗೂ ಸೂಕ್ತವಾಗಿರುವ ಈಜುಕೊಳ
*ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಅತಿಥಿ ಕೊಠಡಿಗಳು
*ದಕ್ಷಿಣ ಕನ್ನಡದಲ್ಲೇ ಪ್ರಥಮ ಸಿಂಥೆಟಿಕ್ ಅತ್ಯಾಧುನಿಕ ಟೆನ್ನಿಸ್ ಕೋರ್ಟ್
*ಆರೋಗ್ಯವಂತ ಜೀವನಕ್ಕೆ ಮಲ್ಟಿ ಜಿಮ್
*ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್, ಟೇಬಲ್ ಟೆನ್ನಿಸ್ ಸಹಿತ ಹಲವು ಸೌಲಭ್ಯ
ಪುತ್ತೂರು: 2012 ರಲ್ಲಿ ಸ್ಥಾಪಿತವಾದ ದಿ ಪುತ್ತೂರು ಕ್ಲಬ್ ಕಳೆದ ಒಂದು ದಶಕದಲ್ಲಿ ಸಮಾಜದ ವಿಶಾಲ ವಿಭಾಗದಿಂದ ತನ್ನ ಸದಸ್ಯರಿಗೆ ವಿವಿಧ ಕ್ರೀಡೆ, ಗೇಮಿಂಗ್ ಮತ್ತು ಮನೋರಂಜನಾ ಸೌಲಭ್ಯಗಳನ್ನು ಒದಗಿಸಿ ಮಹತ್ತರವಾಗಿ ಬೆಳೆದಿದೆ. ಇದೀಗ ವಿವಿಧ ಹೊಸ ಸೌಲಭ್ಯಗಳನ್ನು ಫೆ.8ರಂದು ಸಂಜೆ ಉದ್ಘಾಟಿಸಲಾಗುವುದು ಎಂದು ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
2014ರಲ್ಲಿ 65 ಮಂದಿ ಪೋಷಕ ಸದಸ್ಯರು ಮತ್ತು 300 ಮಂದಿ ಸದಸ್ಯರೊಂದಿಗೆ ಅಧಿಕೃತವಾಗಿ ನೋಂದಣಿಗೊಂಡ ಕ್ಲಬ್ ಹಂತ ಹಂತವಾಗಿ ಬೆಳೆಯುತ್ತಾ ಉತ್ತಮ ಸಾಧನೆ ಮಾಡಿದೆ. ಆರಂಭದಲ್ಲಿ ಒಂದು ಬ್ಯಾಡ್ಮಿಂಟನ್ ಕೋರ್ಟ್, 2 ಕೊಠಡಿಗಳು, ಸ್ನೂಕರ್ ಟೇಬಲ್, ಟೇಬಲ್ ಟೆನ್ನಿಸ್ ಮತ್ತು ರೆಸ್ಟೋರೆಂಟ್‌ನೊಂದಿಗೆ ಪ್ರಾರಂಭವಾಗಿತ್ತು. 2016ರಲ್ಲಿ 150 ಸದಸ್ಯರಿಗೆ ಡೈನಿಂಗ್ ಅವಕಾಶವುಳ್ಳ ರೆಸ್ಟೋರೆಂಟ್ ವಿಸ್ತರಣೆ ಮಾಡಿದ್ದೆವು. 2017ರಲ್ಲಿ ಬಾರ್ ಪರವಾನಿಗೆ ಪಡೆದುಕೊಂಡೆವು. 2021ರಲ್ಲಿ ಈಜುಕೊಳದ ನಿರ್ಮಾಣ ಮತ್ತು ಅದರ ಪಕ್ಕದಲ್ಲಿ ಹುಲ್ಲು ಹಾಸಿನ ಸ್ಟೇಜ್ ಪಾರ್ಟಿ ವ್ಯವಸ್ಥೆ ಮಾಡಿದ್ದೆವು. 2022ರಲ್ಲಿ 2 ಎಕ್ಸಿಕ್ಯೂಟಿವ್ ಕ್ಲಬ್ ಕ್ಲಾಸ್ ಕೊಠಡಿಗಳ ಸೇರ್ಪಡೆ ಮಾಡಿದೆವು. 2022ರಲ್ಲಿ ಆಕರ್ಷಕ ಸ್ವಾಗತ ಲಾಬಿ, ಗೆಜೆಟೋ ಡ್ರೈವ್ ವೇ ನಿರ್ಮಾಣ ಮಾಡಲಾಯಿತು. ಇದೀಗ 2025ರಲ್ಲಿ 30ಚದರ ಅಡಿಯ ವಿಸ್ತೀರ್ಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಲೋಕರ್ಪಾಣೆಗೆ ಸಿದ್ದವಾಗಿದೆ. ಈ ಪೈಕಿ 10 ಡಿಲೆಕ್ಸ್ ರೂಮ್‌ಗಳು ಮತ್ತು 2 ಸೂಟ್ ರೂಮ್‌ಗಳನ್ನು ಮತ್ತು 2400 ಚದರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಜೆಎಂ ಸದಸ್ಯರ ವಿಲೇವಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ 7200 ಚದರ ಅಡಿಗಳಲ್ಲಿ ನಿರ್ಮಾಣಗೊಂಡ 8 ಪದರಗಳ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಕೋರ್ಟ್‌ನ ವಿಶೇಷತೆಯುಳ್ಳ ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ಲೋಕಾರ್ಪಣೆ ಮಾಡಲಾಗುವುದು. ಸದಸ್ಯರ ಮತ್ತು ಸದಸ್ಯ ಅತಿಥಿಗಳಿಗಾಗಿ 1ಸಾವಿರ ಜನರ ಸಾಮರ್ಥ್ಯದ ವಿಶಾಲ ಹಾಲ್, 200 ಜನ ಸಾಮರ್ಥ್ಯದ 2400 ಚದರ ಅಡಿಯ ಮತ್ತೊಂದು ಎಸಿ ಹಾಲ್ ಕೂಡಾ ನಿರ್ಮಾಣಗೊಂಡಿದೆ. ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ಸದಸ್ಯರಿಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯವಿದೆ. ಬೆಂಗಳೂರು, ಮೈಸೂರು, ಹಾಸನ, ಉಡುಪಿ, ಮೂರು ವಿದೇಶಗಳನ್ನು ಸೇರಿ ಒಟ್ಟು 99 ಕ್ಲಬ್‌ಗಳ ಒಡಂಬಡಿಕೆ (ಅಫಿಲಿಯೇಶನ್) ಪಡೆದುಕೊಂಡು ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮನೋರಂಜನಾ ಕ್ಲಬ್ ಆಗಿ ಮೂಡಿ ಬಂದಿದೆ. ಪ್ರಸ್ತುತ 1300 ಸದಸ್ಯರುಗಳನ್ನು ನಮ್ಮ ಕ್ಲಬ್ ಹೊಂದಿದೆ ಎಂದರು.
ಸಾಮಾಜಿಕವಾಗಿಯೂ ಬಹಳಷ್ಟು ಮುಂಚೂಣಿ:
ಕ್ಲಬ್ ಸಾಮಾಜಿಕ ಚಟುವಟಿಕೆಯಲ್ಲೂ ಬಹಳಷ್ಟು ಮುಂಚೂಣಿಯಲ್ಲಿದೆ. ತನ್ನ ಸದಸ್ಯರಿಗೆ ಬಲೆಬಲಿಪುಗ ಮೆರಥಾನ್ ಆಯೋಜಿಸಿದ್ದೆವು. ಕೋವಿಡ್ ಸಂದರ್ಭ ಅದನ್ನು ನಿಲ್ಲಿಸಿದ್ದು, ಇದೀಗ ಮತ್ತೆ ಆರಂಭಿಸಲಿದ್ದೇವೆ. ಮೋಟಾರು ವಾಹನಗಳಲ್ಲಿ ಟ್ರೆಷರ್ ಹಂಟ್, ಅಡುಗೆ ಸ್ಪರ್ಧೆಗಳು, ಶ್ವಾನ ಪ್ರದರ್ಶನ, ಬಾಕ್ಸ್ ಕ್ರಿಕೆಟ್ ಲೀಗ್, ಲಗೋರಿ, ವಾಲಿಬಾಲ್ ಪಂದ್ಯಾವಳಿಗಳು ಮತ್ತು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಧಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಹಳಷ್ಟು ಮಕ್ಕಳಿಗೆ ಸಹಕಾರ, ಅಂಗನವಾಡಿ ಶಾಲೆಗಳಿಗೆ ಸಮವಸ್ತ್ರ ವಿತರಣೆ, ಕೋವಿಡ್ ಸಮಯದಲ್ಲಿ ಮನೆಮನೆಗೆ ತೆರಳಿ ಕಿಟ್ ವಿತರಣೆ, ಅನೇಕ ಶಾಲೆಗಳಿಗೆ ಸಿಸಿಟಿವಿ ಅಳವಡಿಕೆ, ಪುಣ್ಯಕ್ಷೇತ್ರದ ಪ್ರವಾಸೋದ್ಯಮಕ್ಕೆ ಟೆಂಪಲ್ ಟೂರಿಸಮ್, ಮಕ್ಕಳಿಗೆ ಈಜು ತರಬೇತಿ, ಬ್ಯಾಡ್ಮಿಂಟನ್ ತರಬೇತಿ ಮತ್ತು ಮುಂದಿನ ದಿನ ಟೆನ್ನಿಸ್ ತರಬೇತಿ ನೀಡುವ ದೃಷ್ಟಿಕೋನ ಮತ್ತು ಸಾಧಕರಿಗೆ ಗೌರವ ಸದಸ್ಯತನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಾ.ದೀಪಕ್ ರೈ ಹೇಳಿದರು.
ಉದ್ಘಾಟನಾ ಕಾರ್ಯಕ್ರಮ:
ವಿವಿಧ ಸೌಲಭ್ಯಗಳನ್ನು ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸದ ಕ್ಯಾ ಬ್ರಿಜೇಶ್ ಚೌಟ ಅವರು ಟೆನ್ನಿಸ್ ಕೋರ್ಟ್ ಅನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ದೀಪಕ್ ರೈ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ದಿ ಪುತ್ತೂರು ಕ್ಲಬ್‌ನ ಉಪಾಧ್ಯಕ್ಷ ದೀಪಕ್ ಕೆ.ಪಿ. ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ ಉಪಸ್ಥಿತರಿದ್ದರು.