ಪುತ್ತೂರು: ಶ್ರೀ ಆದಿ ಶಂಖರಾಚಾರ್ಯರಿಂಧ ಸ್ಥಾಪಿತವಾದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣವನ್ನು ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಮೂರು ಹಂತದಲ್ಲಿ ನೀಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಸಮಿತಿಯ ತಾಲೂಕು ಸಂಯೋಜಕ ಸುಬ್ರಹ್ಮಣ್ಯ ನಟ್ಟೋಜರವರ ಉಪಸ್ಥಿತಿಯಲ್ಲಿ ಗ್ರಾಮ ಸಮಿತಿಗಳ ರಚನೆಯಾಗಿದ್ದು, ಅದರಂತೆ ಒಳಮೊಗ್ರು ಗ್ರಾಮದ ರಾಮಜಾಲು ಪರ್ಪುಂಜ ಶಾಖಾ ಸಮಿತಿಯನ್ನು ರಚಿಸಲಾಯಿತು.
ಸುಬ್ರಹ್ಮಣ್ಯ ನಟ್ಟೋಜರವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ರಚನಾ ಸಭೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು, ಅಧ್ಯಕ್ಷರಾಗಿ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ರೈ ಬಾರಿಕೆ, ಉಪಾಧ್ಯಕ್ಷರುಗಳಾಗಿ ರಾಜೇಶ್ ಪಿದಪಟ್ಲ, ಪ್ರಮೀಳಾ ಎಸ್. ಸುರೇಶ್, ರೇಖಾ ಎಸ್, ಸಂಘಟಕ ಕಾರ್ಯದರ್ಶಿಯಾಗಿ ಅಶ್ವಿನ್ ಪೂಜಾರಿ ಪಿದಪಟ್ಲ, ಕಾರ್ಯದರ್ಶಿಯಾಗಿ ರಾಜೇಶ್ ಗೌಡ ಶೇಡಿಗುಂಡಿ, ಜೊತೆ ಕಾರ್ಯದರ್ಶಿಯಾಗಿ ರೇಖಾ ರೈ ಪಪುರ್ಪುಂಜ, ಕೋಶಾಧಿಕಾರಿಯಾಗಿ ಸುರೇಶ್ ನಾಯಕ್ರವರುಗಳನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಸದಸ್ಯರುಗಳಾಗಿ ರಾಕೇಶ್ ರೈ ಪರ್ಪುಂಜ, ಪ್ರಜ್ವಲ್, ನಾಗೇಶ್ ಗೌಡ, ರಘುರಾಮ, ಶಮನ್, ಕಾಂತಪ್ಪ ಪೂಜಾರಿ, ಗೌರವ್, ಸುಜಿತ್ ಹೊಸಮನೆ, ಅಖಿಲೇಶ್, ನಿತಿನ್ ಗೌಡ, ಕಿಶನ್ ಗೌಡ, ಭವಿಷ್ ರೈ, ಸುಜಿತ್ ಪಿದಪಟ್ಲ, ದಿನೇಶ್ ಗೌಡ, ರಾಧಾಕೃಷ್ಣ ಗೌಡ, ನಾಗೇಶ್ ರೈ, ಜಗದೀಶ್ ಗೌಡ, ಯಶ್ವಿತ್ ಪೂಜಾರಿ, ಲೋಕೇಶ್, ಜಿತೇಶ್ ಪೂಜಾರಿ,ಶರತ್ ಪೂಜಾರಿ, ಭರತ್, ರಂಜಿತ್, ಶರತ್, ರೋಹಿಣಿ, ಪೂರ್ಣಿಮಾ, ಕಮಲ, ವಾರಿಜ, ಭವಯ ಶೇಡಿಗುಂಡಿ, ಮೀನಾಕ್ಷಿ, ಶ್ರೀಮತಿ ಹೊಸಮನೆ, ಹೇಮಾವತಿ, ಸುಶೀಲ, ಹೇಮಲತಾ, ಸಾವಿತ್ರಿ ರೈ,ರಕ್ಷಾ, ಶ್ರೇಯಾ ರೈ, ಮೋಕ್ಷಿತಾ, ವರ್ಷ, ಭವ್ಯ ಪುನೀತ್, ರಮ್ಯಶ್ರೀ, ಶಶ್ಮಿತಾ, ಉಷಾಲತಾ, ಸುಂದರಿರವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಹರ್ಷಿತ್ ಕುಮಾರ್ ಕೂರೇಲು, ಮಾಧವ ಸ್ವಾಮಿ ಉಪಸ್ಥಿತರಿದ್ದರು.