ಪುತ್ತೂರು : ತಾಲೂಕು ಬಂಟರ ಸಂಘ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಬಂಟರ ಗ್ರಾಮ ಸಮಿತಿ ರಚನೆ ಫೆ.8 ರಂದು ನಡೆಯಲಿದೆ.
ಅಪರಾಹ್ನ 2.30 ಕ್ಕೆ ಹಿರೇಬಂಡಾಡಿ ಗ್ರಾಮ ಸಮಿತಿಯ ರಚನೆಯು ಮೂರ್ತೆದಾರರ ಸಹಕಾರಿ ಸಂಘ ಹಾಲ್ ನಲ್ಲಿ ಹಾಗೂ ಉಪ್ಪಿನಂಗಡಿ & ನೆಕ್ಕಿಲಾಡಿ ಗ್ರಾಮ ಸಮಿತಿ ರಚನೆಯು ಸಂಜೆ 4 ಕ್ಕೆ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆಯಲಿದ್ದು, ಬಂಟ ಬಂಧುಗಳು,ಆಯಾ ಗ್ರಾಮದಲ್ಲಿ ಗ್ರಾಮ ಸಮಿತಿಯನ್ನು ರಚಿಸಿ ಸಕ್ರಿಯಗೊಳಿಸಲು ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಬಂಟರ ಸಂಘದ ಎಲ್ಲಾ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಮಾತೃ ಸಂಘದ ಪದಾಧಿಕಾರಿಗಳು ಭಾಗವಹಿಸುವಂತೆ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ ತಿಳಿಸಿದ್ದಾರೆ.