ಅಧ್ಯಕ್ಷ-ಬಾಲಕೃಷ್ಣ ಕೋಡಿಂಬಾಡಿ, ಕಾರ್ಯದರ್ಶಿ- ತಾರಾನಾಥ ಪಿ ವೀರಮಂಗಲ, ಕೋಶಾಧಿಕಾರಿ – ಬಾಬು ಟಿ ಕಬಕ
ಪುತ್ತೂರು: ಪುತ್ತೂರು ತಾಲೂಕು ಮುಖ್ಯಗುರಗಳ ಸಂಘ ಪುನರ್ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಕೋಡಿಂಬಾಡಿ, ಕಾರ್ಯದರ್ಶಿಯಾಗಿ ತಾರಾನಾಥ ಪಿ ವೀರಮಂಗಲ, ಕೋಶಾಧಿಕಾರಿಯಾಗಿ ಬಾಬು ಟಿ ಕಬಕ ಇವರನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಉಪಾಧ್ಯಕ್ಷರಾಗಿ ಮರಿಯಮ್ಮ ಕೆಮ್ಮಾಯಿ,ಸಂತೋಷ ಕೆಮ್ಮಿಂಜೆ, ಜತೆ ಕಾರ್ಯದರ್ಶಿಯಾಗಿ ಮಂಜುನಾಥ ಬಜತ್ತೂರು,ಲಿಂಗಮ್ಮ ಇರ್ದೆ,ಜಂಟಿ ಕಾರ್ಯದರ್ಶಿಯಾಗಿ ಪುಷ್ಪಾ ಚಿಕ್ಕಮುಡ್ನೂರು, ಜಯಂತಿ ಅರಿಯಡ್ಕ, ಗೌರವಾಧ್ಯಕ್ಷರಾಗಿ ಹನುಮಂತಯ್ಯ ಇವರನ್ನು ಆಯ್ಕೆ ಮಾಡಲಾಯಿತು. ದ.ಕ ಜಿಲ್ಲಾ ಅಧ್ಯಕ್ಷ ನಿಂಗರಾಜು ಸವಣೂರು ಉಪಸ್ಥಿತರಿದ್ದು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.