ಪುತ್ತೂರು: ಕಡಬ ತಲೇಕಿ ಶ್ರೀ ಶ್ರೀನಿವಾಸ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.4ರಂದು ಬ್ರಹ್ಮಶ್ರೀ ವಾಗೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ವೈದಿಕ ಕಾರ್ಯಕ್ರಮದ ಅಂಗವಾಗಿ 12 ಕಾಯಿ ಮಹಾಗಣಪತಿ ಹವನ, ನರಸಿಂಹ ಹವನ, ಶ್ರೀ ವಿಶ್ವನಾಥ ಸ್ವಾಮಿಗೆ ರುದ್ರಾಭಿಷೇಕ, ನವಕಲಶಾಭಿಷೇಕ, ಮಹಾಪೂಜೆ, ಶ್ರೀ ಶ್ರೀನಿವಾಸ ದೇವರಿಗೆ ಪವಮಾನಾಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ತಂಬಿಲ, ಸಾಯಂಕಾಲ ದುರ್ಗಾಪೂಜೆ, ರಂಗ ಪೂಜೆ ನಡೆಯಿತು. ಬೆಳಿಗ್ಗೆ ಮಹತೀ ಭಜನಾ ಮಂಡಳಿ ಕಡಬ, ಮಿತ್ರ ಸಮಾಜ ಮಹಿಳಾ ಭಜನಾ ಮಂಡಳಿ ಪುತ್ತೂರು, ಸಂಜೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಕೇಪು ಇವರಿಂದ ಭಜನಾ ಸೇವೆ ನಡೆಯಿತು. ರಾತ್ರಿ ಶ್ರೀ ಶ್ರೀನಿವಾಸ ದೇವರ ಭಕ್ತಿ ಗೀತೆಗಳ ಧ್ವನಿ ಸುರುಳಿ ಬಿಡುಗಡೆ, ಗಿರಿವನ ನವರಸ ಗಾನಸಿರಿ ಕಲಾವಿದರಿಂದ ಭಕ್ತಿಗಾನ ವೈಭವ ನಡೆಯಿತು.
ಬಾಲಕೃಷ್ಣ ದೇಂತಾರು, ಉಮೇಶ ಕರೆಕೋಡಿ, ಬಾಲಕೃಷ್ಣ ಬಳ್ಳಿತ್ತಡ್ಡ, ಪ್ರೇಮಚಂದ್ರ ಅಜ್ಜರಮೂಲೆ, ಮನೋಜ್, ದಯಾನಂದ ಪ್ರರಿಯ, ಬೆಳ್ಳಿಯಪ್ಪ ಗೌಡ ಕೊಯಕ್ಕುರಿ, ಲತಾ ಮಠಂತಡಿ, ಚೈತ್ರ ಕೆರೆಕೋಡಿ, ಲಾವಣ್ಯ ಮೀನಾಡಿ, ವಾಣಿ ಮೀನಾಡಿ, ದಿವ್ಯ ಕೊಯಕ್ಕುರಿ, ಪ್ರಜಾರಶ್ಮಿ ಕೋಡಿಬೈಲು, ಅನ್ವಿತ್ ಕೆರೆಕೋಡಿ, ಅನುಜ್ಞಾ ಕೆರೆಕೋಡಿ, ಚಿಂತನ ಕೊಯಕ್ಕುರಿ, ವಿವಾನ್ ದಡ್ಡು, ಕಾರ್ತಿಕ್ ಅಜ್ಜರಮೂಲೆ, ತ್ರಿಶೂಲ್ ದಡ್ಡು, ವೀಕ್ಷ ದಡ್ಡು, ಪ್ರೇಕ್ಷ ದಡ್ಡು, ಶ್ರಯನ್ ಬಟ್ಟೆ, ಮೋಕ್ಷ ಮಠಂತ್ತಡಿ, ರಕ್ಷ ಮಠಂತ್ತಡಿ, ನಿಯತ್ ಮಠಂತ್ತಡಿ, ಹಿತೇಶ್ ದಡ್ಡು, ಅಂಶಿಕ್ ದಡ್ಡು, ನಿಶ್ಮಿತ್ ಪುರಿಯ, ಗಣ್ಯ ಬಟ್ಟೆ, ಹಾರ್ದಿಕ್ ಕೋಡಿಬೈಲು ಭಜನಾ ಸೇವೆಯಲ್ಲಿ ಪಾಲ್ಗೊಂಡರು.