ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರೋತ್ಸವದ ಬಗ್ಗೆ ಪುತ್ತೂರು ಭಾಗದ ಪೂರ್ವಭಾವಿ ಸಭೆ ಫೆ. 9ರಂದು ಸಂಜೆ 3 ಗಂಟೆಗೆ ಪುತ್ತೂರಿನ ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶ್ರೀ ಕ್ಷೇತ್ರದ ಜಾತ್ರೋತ್ಸವ ಪರಿಪೂರ್ಣವಾಗುವಲ್ಲಿ ಸಂಪೂರ್ಣವಾಗಿ ಭಾಗಿಗಳಾಗಬೇಕು ಎಂದು ಶ್ರೀಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್. ಕೆ. ಬಿ. ತಿಳಿಸಿದ್ದಾರೆ.