ಪ್ರಧಾನ ಸಂಚಾಲಕ ಅಮಳ ರಾಮಚಂದ್ರ, 9 ಮಂದಿ ಸಹ ಸಂಚಾಲಕರ ನೇಮಕ
ಪುತ್ತೂರು: ಪುತ್ತೂರು ಮಾನವ ಬಂಧುತ್ವ ವೇದಿಕೆಯ ಕಾರ್ಯಕಾರಿ ಸಮಿತಿಯ ಸಭೆಯು ಪುತ್ತೂರು ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆಯಿತು. ಪ್ರಧಾನ ಸಂಚಾಲಕರಾಗಿ ಅಮಲ ರಾಮಚಂದ್ರರವರನ್ನು ಆಯ್ಕೆ ಮಾಡಲಾಯಿತು. ಒಟ್ಟು 108 ಮಂದಿಯ ಪುತ್ತೂರು ತಾಲೂಕು ಕಾರ್ಯಕಾರಿ ಸಮಿತಿಯನ್ನು ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಪ್ರಕಟಿಸಿದರು.
ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಿರಂತರವಾಗಿ ನಡಿಯುತ್ತಿದೆ- ಅಮಲ ರಾಮಚಂದ್ರ:
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕರಾದ ಅಮಲ ರಾಮಚಂದ್ರರವರು, ಮನುವಾದವನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಿರುವ ದೊಡ್ಡ ಶಕ್ತಿ ಇವತ್ತು ದೇಶವನ್ನು ಆಳುತ್ತಿದೆ. ದೇಶದ ದಲಿತರಿಗೆ ದೀನ ದುರ್ಬಲರಿಗೆ ಹಿಂದುಳಿದ ವರ್ಗಗಳಿಗೆ ಶಕ್ತಿಯನ್ನು ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.ಶತಶತಮಾನಗಳಿಂದ ಮನುವಾದದ ಬಲಿಪಶುಗಳಾಗಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಜನ ಕೂಡಾ ಮನುವಾದವನ್ನು ಬೆಂಬಲಿಸುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು. ಸಂವಿಧಾನವನ್ನು ರಕ್ಷಿಸುವ ಈ ವೇದಿಕೆ ಪಕ್ಷ ರಾಜಕಾರಣದಿಂದ ದೂರವಿದ್ದು ಜನಪರ ಚಳುವಳಿಯನ್ನು ಕಟ್ಟುವ ಕಡೆಗೆ ಮುನ್ನಡೆಯಲಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ‘ಸಂವಿಧಾನದ ಮೇಲೆ ಮನುವಾದದ ತೂಗುಗತ್ತಿ’ ಎಂಬ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಿತು.
ಪ್ರಜೆಗಳೆಲ್ಲರೂ ಒಂದೇ ಎಂದು ಪರಿಗಣಿಸುವುದು ಸಂವಿಧಾನದ ಆಶಯವಾಗಿದೆ – ಐವನ್ ಲೋಬೊ:
ಪುತ್ತೂರಿನ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಐವನ್ ಲೋಬೋ ಅವರು ‘ಸಂವಿಧಾನದ ಮೇಲೆ ಮನುವಾದದ ತೂಗುಗತ್ತಿ’ ಎಂಬ ವಿಚಾರದ ಮೇಲೆ ವಿಚಾರಗೋಷ್ಠಿ ನಡೆಸಿಕೊಟ್ಟು ಮಾತನಾಡಿ ಪ್ರಜೆಗಳೆಲ್ಲರೂ ಒಂದೇ ಎಂದು ಪರಿಗಣಿಸುವುದು ನಮ್ಮ ಸಂವಿಧಾನದ ಆಶಯವಾಗಿದೆ. ಆದರೆ ಸಂವಿಧಾನ ಮತ್ತು ಮನುವಾದದ ನಡುವೆ ಇರುವ ವ್ಯತ್ಯಾಸವಾಗಿದೆ. ಸಂವಿಧಾನದ ಮೇಲೆ ಎಲ್ಲಾ ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದ್ದು ಇದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಅಂಬೇಡ್ಕರ್ ಬರೆದ ಸಂವಿಧಾನದ ಪಾತ್ರ ಮಹತ್ತರ-ರಾಜೇಂದ್ರ ಕುಮಾರ್ :
ಮುಖ್ಯ ಅತಿಥಗಳಾಗಿ ಭಾಗವಹಿಸಿದ ಚಿಂತಕ, ಬರಹಗಾರ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಕ್ತಾರ ರಾಜೇಂದ್ರಕುಮಾರ್ ಚಿಲಿಂಬಿ ರವರು ಮಾತನಾಡಿ ಅಂಬೇಡ್ಕರ್‌ರವರು ಹಿಂದೂ ಧರ್ಮದಿಂದ ಹೊರ ಹೋಗಿ ದಮನಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಿದರೆ ಶ್ರೀ.ನಾರಾಯಣ ಗುರುಗಳು ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಧರ್ಮದೊಳಗಿನ ಅನ್ಯಾಯ, ಅಸಮಾನತೆ ಹಾಗೂ ಮನುವಾದದ ವಿರುದ್ಧ ಧ್ವನಿಯೆತ್ತಿ ಸಮಾಜದಲ್ಲಿ ಬದಲಾವಣೆಗಳನ್ನು ತಂದರು ಎಂದರು.ಅನಾದಿ ಕಾಲದಿಂದ ನಡೆದು ಬಂದ ಗುರುಕುಲ ಮಾದರಿ ಶಿಕ್ಷಣ ಪದ್ದತಿಯಲ್ಲಿ ಹಿಂದುಳಿದ ವರ್ಗದ ಮತ್ತು ದಲಿತ ವರ್ಗದ ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಲಾಗಿತ್ತು, ಇಂದು ಎಲ್ಲರಿಗೂ ವಿದ್ಯೆ ತಲುಪಿದ್ದರೆ ಅದರ ಹಿಂದೆ ಅಂಬೇಡ್ಕರ್ ಬರೆದ ಸಂವಿಧಾನದ ಪಾತ್ರ ಮಹತ್ತರವಾದುದಾಗಿದೆ. ಎಂದರು.
ಅಂಬೇಡ್ಕರ್ ರವರ ಸಂವಿಧಾನವನ್ನು ಕಿತ್ತೆಸೆದು ಮನು ವಾದವನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ – ರಘು ಹಾಲ್ಕೆರೆ:
ವೇದಿಕೆಯ ಗೌರವ ಸಲಹೆಗಾರ ರಘು ಹಾಲ್ಕೆರೆ ಮಾತನಾಡಿ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ಮನುವಾದಿಗಳು ಹಿಂದೂ ಸಂವಿಧಾನವನ್ನು ಮಂಡಿಸುವ ಬಗ್ಗೆ ಹೇಳಿಕೆ ನೀಡಿದ್ದು, ಇದು ಅಂಬೇಡ್ಕರ್‌ರವರ ಸಂವಿಧಾನವನ್ನು ಕಿತ್ತೆಸೆದು ಮನುವಾದವನ್ನು ಈ ದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪ್ರಯತ್ನವಾಗಿದೆ ಎಂದು ಹೇಳಿದರು.
ಕೋಮು ದ್ವೇಷ ಹೋಗಲಾಡಿಸಲು ಪ್ರಧಾನ ಪಾತ್ರ ನಿರ್ವಹಿಸಲಿ- ವಿಶ್ವನಾಥ ರೈ:
ಸಭಾಧ್ಯಕ್ಷತೆ ವಹಿಸಿದ್ದ ವೇದಿಕೆ ಗೌರವ ಸಲಹೆಗಾರ ಎಂ.ಬಿ.ವಿಶ್ವನಾಥ ರೈಯವರು ಮಾತನಾಡಿ ವೇದಿಕೆಯನ್ನು ತಾಲೂಕಿನ ಎಲ್ಲಾ ಗ್ರಾಮಗಳಿಗೂ ವಿಸ್ತರಿಸಿ, ಸದೃಢ ಸಂಘಟನೆಯನ್ನು ಕಟ್ಟಿ, ಪುತ್ತೂರಿನಲ್ಲಿ ಕೋಮು ದ್ವೇಷವನ್ನು ಹೋಗಲಾಡಿಸುವಲ್ಲಿ ಮಾನವ ಬಂಧುತ್ವ ವೇದಿಕೆ ಪ್ರಧಾನ ಪಾತ್ರವನ್ನು ನಿರ್ವಹಿಸಲಿ ಎಂದು ಹೇಳಿದರು.
ವೇದಿಕೆಯ ಗೌರವ ಸಲಹೆಗಾರರಾದ ಡಾ.ರಾಜಾರಾಮ್ ಕೆ.ಬಿ, ಉಪ್ಪಿನಂಗಡಿ ವಲಯ ಉಸ್ತುವಾರಿ ಶೇಷಪ್ಪ ನೆಕ್ಕಿಲು, ಜಿಲ್ಲಾ ಸಂಚಾಲಕ ಜಯರಾಮ ಪೂಜಾರಿ ಬಾಳಿಲ, ಕರಾವಳಿ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಅಮೂಲಾಗ್ರವಾಗಿ ಚರ್ಚಿಸಲಾಯಿತು. ವೇದಿಕೆಯ ಸಹ ಸಂಚಾಲಕರುಗಳಾದ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ ಅಬ್ದುಲ್ ರೆಹಮಾನ್ ಯೂನಿಕ್ ವಂದಿಸಿದರು. ವಿಜಯಲಕ್ಷ್ಮಿ ಮತ್ತು ಬಳಗದವರು ಆಶಯಗೀತೆ ಹಾಡಿದರು, ರಾಮಚಂದ್ರ ಸೊರಕೆ ಕಾರ್ಯಕ್ರಮ ನಿರೂಪಿಸಿದರು.
ಸಹ ಸಂಚಾಲಕರು:
ಸಹ ಸಂಚಾಲಕರಾಗಿ ಮೌರೀಸ್ ಮಸ್ಕರೇನ್ಹಸ್, ಮಹಮ್ಮದ್ ರಿಯಾಝ್ ಕೊಪ್ಪಳ, ಗಗನ್ ದೀಪ್ ಬನ್ನೂರು ಕರ್ಮಲ, ಮನೋಹರ ರೈ ಎಂಡೆಸಾಗು, ಉಲ್ಲಾಸ್ ಕೋಟ್ಯಾನ್, ಅಬ್ದುಲ್ ರಹಿಮಾನ್ ಯೂನಿಕ್, ರಾಮ ಪಾಂಬಾರು, ಸದಾನಂದ ನಾಯ್ಕ, ಜಾನ್ ಕೆನ್ಯೂಟ್ ಮಸ್ಕರೇನ್ಹಸ್. ಪುತ್ತೂರು ನಗರ: ಸಂಚಾಲಕರಾಗಿ ರೋಶನ್ ರೈ ಬನ್ನೂರು, ವಾಲ್ಟರ್ ಸಿಕ್ವೆರಾ ಪರ್ಲಡ್ಕ, ಇಸ್ಮಾಯಿಲ್ ಬೊಳುವಾರು, ಪುತ್ತೂರು ನಗರ ಸಹ ಸಂಚಾಲಕರು: ಸಹ ಸಂಚಾಲಕರಾಗಿ ದಾಮೋದರ ಬಂಡಾರ್ಕರ್, ವಿಕ್ಟರ್ ಪಾಯಿಸ್, ರೋಶನ್ ಎಲ್. ಡಯಾಸ್ ಬಪ್ಪಳಿಗೆ, ಶೇಖರ ಪಡೀಲ್, ಐವನ್ ಡಿ’ಸೋಜ, ಅಭಿಷೇಕ್ ಬೆಳ್ಳಿಪ್ಪಾಡಿ, ಮಂಜು ಸುವರ್ಣ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರೋಷನ್ ಭಂಡಾರಿ, ಮಂಜುನಾಥ್ ಕೆಮ್ಮಾಯಿ,ನರಿಮೊಗರು ವಲಯ: ಸಂಚಾಲಕರಾಗಿ ಹಬೀಬುಲ್ಲಾ ಕಣ್ಣೂರು, ರಾಮಚಂದ್ರ ಸೊರಕೆ, ಝುಬೈರ್ ಪಿ.ಕೆ, ಪಾಣಾಜೆ ವಲಯ: ಸಂಚಾಲಕರಾಗಿ ಹರೀಶ್ ಕೋಟ್ಯಾನ್, ಫಾರೂಕ್ ಟಿ.ಎಮ್ ನೆಟ್ಟಣಿಗೆ ಮೂಡ್ನೂರು ವಲಯ: ಸಂಚಾಲಕರಾಗಿ ಸುಂದರ ನಿಧಿಮುಂಡ, ಗೋಪಾಲ ಪಾಟಾಳಿ, ಸಿದ್ದಿಕ್ ಸುಲ್ತಾನ್, ಉಪ್ಪಿನಂಗಡಿ ವಲಯ: ಸಂಚಾಲಕರಾಗಿ ಶೇಷಪ್ಪ ನೆಕ್ಕಿಲು, ಅಬ್ದುಲ್ ಮಜೀದ್ ಕುದ್ಲೂರು, ವಿಟ್ಲ ವಲಯ: ಸಂಚಾಲಕರಾಗಿ ಶ್ರೀನಿವಾಸ ಶೆಟ್ಟಿ ಕೊಲ್ಯ, ಅಬ್ದುಲ್ ಕರೀಮ್ ಕುದ್ದುಪದವು, ಪುಣಚ ವಲಯ: ಸಂಚಾಲಕರಾಗಿ ಬಾಲಕೃಷ್ಣ ಪೂಜಾರಿ, ಮಹಾಲಿಂಗ ನಾಯ್ಕ ಪುಣಚ, ಸಿ.ಆರ್.ಸಿ. ವಲಯ ಸಂಚಾಲಕರು: ಪ್ರಜ್ವಲ್ ಪ್ರಭು, ಲೋಕೇಶ್ ಕೌಡಿಚಾರ್, ರೂಪ್‌ರಾಜ್ ಮೊಗಪ್ಪೆ, ತಾಲೂಕು ಸಂಚಾಲನಾ ಸಮಿತಿ ಸದಸ್ಯರುಗಳು: ತಾಲೂಕು ಸಂಚಾಲನ ಸಮಿತಿ ಸದಸ್ಯರುಗಳಾಗಿ ಆಲಿಕುಂಞಿ ಕೊರಿಂಗಿಲ, ಕಲಂದರ್ ಶಾಫಿ ಸಂಪ್ಯ, ಚಂದ್ರಶೇಖರ್, ಅಬ್ದುಲ್ ಲತೀಫ್, ಕೆ.ವಿಶ್ವನಾಥ ಪೂಜಾರಿ ಮಾಡಾವು, ಉಮ್ಮರ್ ಜನಪ್ರಿಯ ಆರ್ಲಪದವು, ಕಲಂದರ್ ಶಾಫಿ ನೆಕ್ಕಿಲಾಡಿ, ಬಿ.ಮಣಿ ಬಪ್ಪಳಿಗೆ, ದಿನೇಶ್ ಕೆ, ಕೆ.ಬಾಲಕೃಷ್ಣ ಗೌಡ ಪಡ್ರೆ, ಶಾಹುಲ್ ಹಮೀದ್ ಜಾಲಗದ್ದೆ, ಮಹೇಶ್ ಕೆ. ಪಟ್ಟೆ, ಗ್ರೆಗೊರಿ ಡಿ’ಸೋಜ, ರೊನಾಲ್ಡ್ ಮೊಂತೆರೋ, ವಿನೋದ್ ರೈ ಕೆಳಗಿನಮನೆ, ಪಿ.ಎಂ.ಇಬ್ರಾಹಿಂ, ವಿಠಲ ನಾಯ್ಕ, ಕಲಾವಿದ ಕೃಷ್ಣಪ್ಪ , ಪ್ರವೀಣ ಕೆಮ್ಮಾರ, ಲೋಹಿತ್ ಬಾರಿಕೆ, ಅಬ್ದುಲ್ ಸತ್ತಾರ್ ಕೊಳ್ತಿಗೆ, ಸೈಮನ್ ಗೊನ್ಸಾಲ್ವಿಸ್, ವೀಣಾ ದೇವಪ್ಪ ನಾಯ್ಕ, ಶ್ರೀನಿಧಿ ಕೆ.ಜೆ, ಜಯಂತಿ ಬಲ್ನಾಡು, ಗಂಗಾಧರ ಪಾಟಾಳಿ ಕಾವು, ಪೌಲ್ ಮೊಂತೆರೋ ಪುತ್ತೂರು, ವಿನ್ಸೆಂಟ್ ತಾವ್ರೋ ಬಾಬು ಮರಿಕೆ, ಫಾರೂಕ್ ಝಿಂದಗಿ, ಅಬ್ದುಲ್ ಖಾದರ್ ಆದರ್ಶನಗರ, ಶರೀಫ್ ಕೊಯಿಲ, ಅಬ್ದುಲ್ ರಝಾಕ್, ಬಾಯಂಬಾಡಿ, ಕಮಲೇಶ್ ಸರ್ವೆ, ಸಂತೋಷ್ ಕೌಡಿಚ್ಚಾರ್, ಮನ್ಸೂರ್ ಮೌಲವಿ, ಎಂ.ಬಿ.ಇಬ್ರಾಹಿಂ ಮೈರೋಳು, ಗಣೇಶ್ ಕೆ., ಆಸ್ಮ ಗಟ್ಟಮನೆ, ಹನೀಪ್ ಮಾಡಾವು, ರಾಮ ಮೇನಾಲ, ಅಶೋಕ್ ಪೂಜಾರಿ, ಮಹಮ್ಮದ್ ಅಶ್ರಫ್ ಕೊಡಿಪ್ಪಾಡಿ, ವಿಮಲ ನಾಯ್ಕ, ವಿಜಯಲಕ್ಷ್ಮಿ. ಆದಂ ಕುಂಞಿ ಕಲ್ಲರ್ಪೆ, ಶೇಖರ ಮಾಡಾವು, ಅರ್ಶದ್ ದರ್ಬೆ, ಗಣೇಶ್ ಬಂಗೇರ ಕೊರುಂ, ರವೀಂದ್ರ ರೈ ನೆಕ್ಕಿಲು ಜಯಂತ ನಗರ, ಶ್ರೀಧರ ಪೂಜಾರಿ ಚಾಲೆಪಡ್ಪು, ರವಿ ಮಣಿಯ.ಗೌರವ ಸಲಹೆಗಾರರು: ಎಂ.ಬಿ.ವಿಶ್ವನಾಥ ರೈ, ಎಚ್. ಮಹಮ್ಮದ್ ಆಲಿ, ಎಸ್.ಬಿ. ದಾರಿಮಿ, ವಿ.ಎಚ್.ಎ. ಶಕೂರ್ ಹಾಜಿ, ಮಹಾಲಿಂಗ ನಾಯ್ಕ, ವಲೇರಿಯನ್ ಡಯಾಸ್, ಸೂತ್ರಬೆಟ್ಟು ಜಗನ್ನಾಥ ರೈ, ಡಾ.ರಾಜಾರಾಮ್ ಕೆ.ಬಿ, ಮಹಮ್ಮದ್ ಬಡಗನ್ನೂರು, ಅಶ್ರಪ್ ಬಸ್ತಿಕಾರ್, ಶಶಿಕಿರಣ್ ರೈ ನೂಜಿಬೈಲು, ಝೇವಿಯರ್ ಡಿ’ಸೋಜ, ರಘು ಹಾಲ್ಕೆರೆ, ಐವನ್ ಲೋಬೋ ರವರನ್ನು ಆಯ್ಕೆ ಮಾಡಲಾಯಿತು.