ಪುತ್ತೂರು:ಭಾರತೀಯ ಕಲೆ, ಲಲಿತ ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಕೆಲಸ ಮಾಡುವ ರಾಷ್ಟ್ರೀಯ ಚಿಂತನೆ ಸಂಸ್ಥೆಯೆ ಸಂಸ್ಕಾರ ಭಾರತಿ. ಬೇರೆ ಬೇರೆ ವಿಶೇಷ ಕೆಲಸ ಕಾರ್ಯಗಳ ಮೂಲಕ ಉತ್ತಮ ರೀತಿಯಲ್ಲಿ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದ್ದು ಜಿಲ್ಲಾ ಸಭೆಯಲ್ಲಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ಮನ್ಮಥ ಶೆಟ್ಟಿ ಪುತ್ತೂರು ಇವರನ್ನು ಘೋಷಣೆ ಮಾಡಲಾಗಿದೆ.
ಬರಹಗಾರರಾಗಿ, ಭಾಷಣಗಾರರಾಗಿ, ದೈವರಾಧನೆ, ಸಾಹಿತ್ಯ, ಜಾನಪದ ಮತ್ತು, ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಕಳೆದ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಬೇರೆ ಪ್ರಶಸ್ತಿಗಳನ್ನು ಪಡೆದುಕೊಂಡವರಾಗಿದ್ದು ಇವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷರಾದ ತಾರಾನಾಥ್ ಕೊಟ್ಟಾರಿಯವರು ಜಿಲ್ಲಾ ಬೈಠಕ್ ನ ಪ್ರಮುಖರ ಸಭೆಯಲ್ಲಿ ಘೋಷಿಸಿದರು. ಸಭೆಯಲ್ಲಿ ಬೆಳ್ತಂಗಡಿ, ಬಂಟ್ವಾಳ,ಪುತ್ತೂರಿನ ಸಂಯೋಜಕರು, ಗೌರವಧ್ಯಕ್ಷರು, ಪ್ರಮುಖರು ಉಪಸ್ಥಿತರಿದ್ದರು.