ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ, ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಪಡುಮಲೆ ಇದರ ವತಿಯಿಂದ ಸಾರ್ವಜನಿಕ ಶ್ರೀ ಚಂಡಿಕಾ ಹವನ ಮತ್ತು ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವೆ (ಸಂಪೂರ್ಣ ಶ್ರೀ ದೇವಿ ಮಹಾತ್ಮೆ) ಕಾರ್ಯಕ್ರಮವು ಶ್ರೀ ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ರವರ ಗೌರವಾಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.7 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ನಡೆಯಿತು.
ಫೆ.7 ರಂದು ಬೆಳಗ್ಗೆ ದೀಪ ಪ್ರಜ್ವಲನೆ, ಕಟೀಲು ಮೇಳದ ಶ್ರೀ ದೇವರ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಶ್ರೀ ಚಂಡಿಕಾ ಹವನದ ಪೂರ್ಣಾಹುತಿಗೊಂಡಿತು ಬಳಿಕ, ಶ್ರೀ ಕ್ಷೇತ್ರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವತ್ರಿಕ ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ ಚೌಕಿ ಪೂಜೆ ಬಳಿಕ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ
ಧರ್ಮ ಅನುಯಾಯಿಗಳಾಗಿ ಕೆಲಸ ಮಾಡಿದಾಗ ಧರ್ಮದ ಒಳಿತು ಮಾಡಲು ಸಾಧ್ಯ ಎಂದು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಗಳು ಹೇಳಿದರು. ಅವರು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ವತಿಯಿಂದ ನಡೆದ ಸಾರ್ವಜನಿಕ ಚಂಡಿಕಾ ಹವನ ಮತ್ತು 5ನೇ ವರ್ಷದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಭಾರತ ದೇಶದಲ್ಲಿ ನಾವೆಲ್ಲರೂ ಸಂಪನ್ನದಿಂದ ಜೀವಿಸುತ್ತಿದ್ದೇವೆ. ಆಧ್ಯಾತ್ಮಿಕ ಚೈತ್ಯ ನಿರಂತರವಾಗಿ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಅನೇಕ ಧಾರ್ಮಿಕ ಆಚರಣೆಗಳು ನಡೆಯುತ್ತ ಬರುತ್ತಿದ್ದೇವೆ ಹಿಂದೂ ಧರ್ಮವನ್ನು ಎಲ್ಲಿಯೂ ಮತ ಎಂದು ಹೇಳಿಲ್ಲ ಅದನ್ನು ಯಾರಿಗೂ ಧರಿಸಿಕೊಳ್ಳುವುದಕ್ಕೆ ಅಡ್ಡಿಯಿಲ್ಲ ಮತ ಒಂದು ಪಂಗಡಕ್ಕೆ ಸೀಮಿತವಾಗಿದೆ. ಆ ವಿಚಾರವನ್ನು ಯಾರು ತೊಡಗಿಸಿಕೊಂಡಿದ್ದಾರೂ ಅಂತ ಅನುಯಾಯಿಗಳು ಒಳಗೊಂಡರುವುದು ಮತ. ಇರುವಂತ ಒಳಿತನ್ನು ಅರಿತುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿ ಅದರಲ್ಲಿ ಸನ್ನದರಾಗಿರುವುದು ಮತ್ತು ಮುಕ್ತ ಅವಕಾಶ ಕಲ್ಪಿಸಿಕೊಟ್ಟಿರುವುದೇ ಸನಾತನ ಹಿಂದು ಧರ್ಮ. ಅದು ಯಾರಿಂದಲ್ಲೂ ಸಾದಿಸಿದಲ್ಲ ನಿತ್ಯ ನಿರಂತರವಾಗಿ ಹರಿದುಬಂದಿರುವಂತದು. ಇದರಿಂದ ನಾಲ್ಕು ಯುಗ ಕ್ರಮಿಸಿದೆ. ಈ ಸಂದರ್ಭದಲ್ಲಿ ಕೂಡ ತನ್ನ ಜೀವಸತ್ವವನ್ನು ನಿತ್ಯ ನಿರಂತರವಾಗಿ ಕಾಪಾಡಿಕೊಂಡಿದೆ. ಧರ್ಮದಲ್ಲಿ ಆಚರಣೆ ಬಗ್ಗೆ ಅದರ ಆಂತರಿಕ ಆಳವನ್ನು ಅರಿಯದವರು ಅದರಲ್ಲಿ ತುಂಬಿರುವ ಸತ್ವದ ಬಗ್ಗೆ ತಿಳಿಯದವರು ಸ್ವಾರ್ಥವನ್ನು ಈಡೇರಿಸಿಕೊಳ್ಳುವರು ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತಹವರ ವಿರುದ್ಧ ಯಾರು ಪ್ರಶ್ನಿಸುವುದಿಲ್ಲ ಎಂಬುದು ಯುವ ಶಕ್ತಿಯಲ್ಲಿರುವ ಒಂದು ದೊಡ್ಡ ಬಾವನೆ. ಹಿಂದು ನಿರಂತರವಾಗಿ ಪ್ರಚಾರಪಡಿಸುವ ಧರ್ಮ ಆಚರಣೆಯಲ್ಲಿ ತೊಡಗಿಸಿಕೊಂಡವರು ಧರ್ಮ ವಿಚಾರವನ್ನು ನಿಂದಿಸುವವರನ್ನು ಪ್ರಶ್ನಿಸಲು ಹಿಂದು ಧಾರ್ಮಿಕ ಆಚರಣೆಗಳು ಸಂಪನ್ನಗೊಂಡಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವವರೆಲ್ಲ ಸಮಾಜ ಒಳಿತಿಗಾಗಿ ಮಾತನಾಡುವರಲ್ಲ ಭಾವನೆ, ಹಿಂದು ಧರ್ಮದ ಸಾತ್ವಿಕ, ಸೈದ್ಧಾಂತಿಕ ವಿಚಾರಧಾರೆಗಳನ್ನು ಅರಿತು ಕೊಂಡಿರುವ ಒಪ್ಪಿಕೊಂಡಿರುವ ಆ ಮಾರ್ಗವನ್ನು ಅನುಸರಿಸುವರು ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ ಪಧರ್ಮ ಸಂರಕ್ಷಣೆ ನಮ್ಮ ಹಕ್ಕು ಧಾರ್ಮಿಕ ರಂಗದಲ್ಲಿರುವಲ್ಲರೂ ತೃಪ್ತರು ಧರ್ಮ ಅನುಯಾಯಿಗಳಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜ ಒಳಿತು ಸಾಧ್ಯ ಎಂದು ಶುಭ ಹಾರೈಸಿದರು.
ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ ಉಳಿದ ಮಾತ್ರ ನಾವೆಲ್ಲರೂ ನೆಮ್ಮದಿ ಜೀವನ ಸಾಧ್ಯ ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮ ಆಚರಣೆ ಮೂಲಕ ಧರ್ಮ ಉಳಿವಿಗೆ ನಾವು ನಂಬಿಕೊಂಡು ಬಂದಿರುವ ದೇವರು ಶಕ್ತಿ ತುಂಬುವ ಕೆಲಸ ಮಾಡಲಿ ಎಂದು ಪ್ರಾರ್ಥಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಕಟೀಲು ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ಮಾತನಾಡಿ, ಭಾರತ ದೇಶದಲ್ಲಿ ನೆಮ್ಮದಿ ಶಾಂತಿ ಜೀವನವನ್ನು ಕಂಡು ಇಡೀ ಜಗತ್ತು ಆಶ್ಚರ್ಯ ಪಡುವಂತಾಗಿದೆ ಋಷಿ ಮುನಿಗಳು ವಿಶೇಷ ತ್ರಿಕಾಲ ಜ್ಞಾನ ಮುಖಾಂತರ ಇಂತಹ ಧಾರ್ಮಿಕ ಆಚರಣೆ ನಡೆಸಲು ಸಾಧ್ಯವಾಗಿದೆ. ಜೀವನ ಧರ್ಮ ಗರಡಿಯಲ್ಲಿ ನೆಮ್ಮದಿ ಜೀವನ ನಡೆಯುತ್ತಿದೆ. ನಾವು ಆರಾಧಿಸುವ ಶಕ್ತಿಗಳು ನಂಬಿದ ದೈವದೇವರು ಮತ್ತು ನಮ್ಮ ನಂಬಿಕೆಯಿಂದ ಹಿಂದೂ ಧರ್ಮಕ್ಕೆ ಶ್ರೀರಕ್ಷೆಯಾಗಿದೆ. ಹಿಂದು ಧರ್ಮ ನಮ್ಮ ಜೀವನ ಧರ್ಮ. ನಮ್ಮ ಆಹಾರ ಪದ್ದತಿ ಧರ್ಮದಲ್ಲಿದೆ. ಧರ್ಮಕ್ಕೆ ತೊಂದರೆಯಾದಗ ಭಗವಂತನೆ ಕಾಪಾಡುತ್ತಾನೆ ಇದು ಪುರಾಣ ಶಾಸ್ತ್ರದಲ್ಲೂ ನೋಡುತ್ತಿದ್ದೇವೆ. ಯಾವುದೇ ಧರ್ಮದಲ್ಲಿ ನಮ್ಮಲ್ಲಿರುವ ನಂಬಿಕೆ, ದ್ರೋಹ ಮಾಡುವುದಿಲ್ಲ. ಅಂತಹ ಸಂಸ್ಕಾರದಲ್ಲಿ ಹಿಂದೂ ಧರ್ಮದಲ್ಲಿ ಹುಟ್ಟಿರುವುದು ನಮ್ಮ ಭಾಗ್ಯ ಧಾರ್ಮಿಕ ಆಚರಣೆ ಮಾಡುವ ಮೂಲಕ ದೇಶದಲ್ಲಿ ನೆಮ್ಮದಿ ಜೀವನಕ್ಕೆ ಪಣತೊಡುವ ಮೂಲಕ ಧರ್ಮ ರಕ್ಷಣೆಗೆ ಕೈಜೋಡಿಸುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪವಿತ್ರಪಾಣಿ ಕೇಶವ ಭಟ್ ಕೋವೆತ್ತೋಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪಡುಮಲೆ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಉದಯ ಕುಮಾರ್ ಪಡುಮಲೆ ಉಪಸ್ಥಿತರಿದ್ದರು.
ಬಯಲಾಟ ಸಮಿತಿ ಕೋಶಾಧಿಕಾರಿ ಸುರೇಶ್ ರೈ ಪಳ್ಳತ್ತಾರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಭಟ್ ಈಶಮೂಲೆ ವಂದಿಸಿದರು. ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪುರಂದರ ರೈ, ಕುದ್ಗಾಡಿ ಜನಾರ್ಧನ ಪೂಜಾರಿ ಪದಡ್ಕ, ಕೋಶಾಧಿಕಾರಿ ರವಿರಾಜ ರೈ ಸಜಂಕಾಡಿ, ಪ್ರಧಾನ ಕಾರ್ಯದರ್ಶಿ ಗಣೇಶ ಭಟ್, ಈಶಮೂಲೆ, ಜೊತೆ ಕಾರ್ಯದರ್ಶಿ ಸುರೇಶ ರೈ ಪಳ್ಳತ್ತಾರು, ಲೆಕ್ಕ ಪರಿಶೋಧಕ ರಾಜೇಶ್, ಮರದ ಮೂಲೆ ಸುಳ್ಯಪದವು, ಗೌರವ ಸಲಹಾರರಾದ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಎಂ. ಲಕ್ಷ್ಮೀನಾರಾಯಣ ರಾವ್, ಪಡುಮಲೆ, ಪ್ರಗತಿಪರ ಕೃಷಿಕ ಕೃಷ್ಣ ರೈ, ಕುದ್ಗಾಡಿ ಸುಳ್ಯಪದವು ಬಾಲಸುಬ್ರಹ್ಮಣ್ಯ ಹಿ.ಪ್ರಾ ಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ಗೌಡ, ಬಸವಹಿತ್ತು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀನಿವಾಸ ಗೌಡ, ಕನ್ನಯ, ಕುಮಾರ, ಅಂಬಟೆಮಲೆ, ಶಶಿಧರ, ಪಟ್ಟೆ ಅಪ್ಪಯ ನಾಯ್ಕ, ತಲೆಂಜಿ, ಸಂಜೀವ ಸಾಲಿಯಾನ್, ಅಣಿಲೆ ರಮೇಶ ರೈ, ಕೈೂಲ, ವಿಶ್ವನಾಥ ಪೂಜಾರಿ, ‘ಸಸ್ಯ ಸಂಜೀವಿನಿ’, ಪಡುಮಲೆ, ರಾಜೇಶ್,ಮರದಮೂಲೆ ಸುಳ್ಯಪದವು, ಸುಧೀರ್ ನಾಯಕ್, ಇಂದಾಜೆ, ಸುಂದರ, ಕನ್ನಡ, ತ್ಯಾಂಪಣ್ಣ ಮೂಲ್ಯ ಸಿ. ಎಚ್.,
ಕಾಂತಪ್ಪ ಪೂಜಾರಿ ಮಡತನಮೂಲೆ, ಕೃಷ್ಣಪ್ರಸಾದ ರೈ, ಪಡುಮಲೆ. ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.