ಕುರಿಂಜ-ಕುಂಟಾಪು: ಶ್ರೀ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೂತನ ಶಾಖಾ ತರವಾಡು ಮನೆಯ ಗೃಹಪ್ರವೇಶ

0


ಅರಿಯಡ್ಕ: ಶ್ರೀ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಕುರಿಂಜ ಕುಂಟಾಪು ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೂತನ ಶಾಖಾ ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವಗಳ ನೇಮೋತ್ಸವ ಫೆ.10 ರಂದು ಬ್ರಹ್ಮ ಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಆರ್ಶೀವಾದಗಳೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.


ಕಾರ್ಯಕ್ರಮ

ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಬೆಳಿಗ್ಗೆ 8-48 ರಿಂದ 9-30ರ ಮೀನ ಲಗ್ನದ ಸುಮೂಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ, ಅನ್ನಸಂತರ್ಪಣೆ, ಸಂಜೆ ಶ್ರೀ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ ಎಂದು‌ ಶ್ರೀ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ಸೇವಾ ಟ್ರಸ್ಟ್ ರಿ. ಕುರಿಂಜ ಕುಂಟಾಪು ಇದರ ಅಧ್ಯಕ್ಷ ಸೀತಾರಾಮ ಮಣಿಯಾಣಿ ಕೂಟ್ಲುಂಗಾಲು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here