ಪಡುಮಲೆ: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿರುವ ಬಿಲ್ವಾಶ್ವತ್ಥ ಕಟ್ಟೆಯ ಅಶ್ವತ್ಥವೃಕ್ಷಕ್ಕೆ ಅಶ್ವತ್ಥೋಪನಯನ ಹಾಗೂ ವಿವಾಹ ಕಾರ್ಯಕ್ರಮ ಫೆ.10 ರಂದು ಪೂರ್ವಾಹ್ನ ಗಂ 12.17ರ ಶುಭಮುಹೂರ್ತದಲ್ಲಿ ಜರಗಲಿರುವುದು.
ಸದ್ರಿ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ, ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.