ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಫೆ.22 ರಂದು ಚುನಾವಣೆ ನಡೆಯಲಿದೆ.
ಸಾಲಗಾರರ ಕ್ಷೇತ್ರದಿಂದ 5 ಸಾಮಾನ್ಯ ಸ್ಥಾನಗಳು, ಪ.ಜಾತಿ ಮೀಸಲು 1 ಮತ್ತು ಪ.ಪಂಗಡ ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನ 1, ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನ 1 ಹಾಗೂ ಮಹಿಳಾ ಮೀಸಲು ಸ್ಥಾನ 2 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 1 ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಫೆ.10 ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು ಫೆ.14 ನಾಮಪತ್ರ ಸಲ್ಲಿಸಲು ಕೊನೇಯ ದಿನಾಂಕವಾಗಿದೆ. ಫೆ.15 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಫೆ.16 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಫೆ.16 ರಂದು ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆಗೊಳ್ಳಲಿದೆ. ಫೆ.22 ರಂದು ಬೆಳಿಗ್ಗೆಯಿಂದ ಸಂಜೆ ತನಕ ಮತದಾನ ನಡೆದು ಸಂಜೆ ಮತ ಎಣಿಕೆಯ ಬಳಿಕ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಶಿವಲಿಂಗಯ್ಯ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.