ಈಶ್ವರಮಂಗಲ: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಹಾಗೂ ಕಿನ್ನಿಮಾಣಿ ಪೂಮಾಣಿ, ಪಿಲಿ ಚಾಮುಂಡಿ ದೈವಗಳ ನೇಮೋತ್ಸವವು ಫೆ.24 ರಿಂದ ಮಾ.4 ವರೆಗೆ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವ ಶಿಷ್ಠ ಸಂಪ್ರದಾಯ ಪ್ರಕಾರ ನಡೆಯಲಿರುವುದು ಇದರ ಪೂರ್ವಬಾವಿ ಗೊನೆಮುಹೂರ್ತವು ಈಶ್ವರ ಮಂಗಲ ಶಿಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ದೇವಳದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ ಇವರ ಮನೆಯ ತೋಟದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪವಿತ್ರ ಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಅರ್ಚಕ ರವೀಂದ್ರ ಮಾಣಿಲತ್ತಾಯ, ಸಂದೀಪ ಕಾರಂತ, ಉದಯಕುಮಾರ ಪಡುಮಲೆ, ಆಶಿಷ ಕುಂಜತ್ತಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಗೌರವಾಧ್ಯಕ್ಷ ರತನ್ ಕುಮಾರ್ ನಾಕ್ ಕರ್ನೂರು ಗುತ್ತು,ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನದಾಸ ಶೆಟ್ಟಿ ನೂಜಿಬೈಲು, ಖಜಾಂಚಿ ದೀಪಕ್ ಕುಮಾರ್ ಮುಂಡ್ಯ,ಜತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಪದಾದಿಕಾರಿಗಳಾದ ಆನಂದ ರೈ ಸಾಂತ್ಯ, ಪ್ರದೀಪ ರೈ ಮೇನಾಲ,ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಉಪಾಧ್ಯಕ್ಷ ರುಗಳಾದ ಸುಭಾಷ್ಚಂದ್ರ ರೈ ಮೈರೋಳು, ಚಿನ್ಮಯ ರೈ ನಡುಬೈಲು, ಖಜಾಂಚಿ ಬಿ.ರಾಮಣ್ಣ ನಾಯ್ಕ,ಸಸಿಹಿತ್ಲು-ಕುತ್ಯಾಳ ಸದಸ್ಯರುಗಳಾದ ರಾಮ ಮೇನಾಲ,ಗಣೇಶ್ ವಜ್ರಮೂಲೆ, ಅಚ್ಚುತ ಮಣಿಯಾಣಿ, ರಮೇಶ್ ಪುಜಾರಿ ಮುಂಡ್ಯ,ಆನಂದ ಕೆಮ್ಮತ್ತಡ್ಕ, ರಮಾನಂದ ಕೋರಿಗದ್ದೆ, ರಾಮಣ್ಣ ನಾಯ್ಕ ಹಾಗೂ ಭಕ್ತದಿಗಳು ಉಪಸ್ಥಿತರಿದ್ದರು.