ಪುತ್ತೂರು ಭಾರತ್ ನೆಕ್ಸಾ ಮಳಿಗೆ ಮುಂಭಾಗದಲ್ಲಿ ನೆಕ್ಸಾ ಕಾರುಗಳ ಮೆಗಾ ಎಕ್ಸ್ಚೇಂಜ್ ಲೋನ್ ಮೇಳ
ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ರಾತ್ರಿ ಮಾನೆಚ್ಚಿಲ್, ಅಗೇಲು ಸೇವೆ
ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಅಗೇಲು ಸೇವೆ
ನರಿಮೊಗರು ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಸಂಕ್ರಮಣ ಸೇವೆ
ನಿಡ್ಪಳ್ಳಿ ಗ್ರಾ.ಪಂ ಕಚೇರಿ ಸಭಾಂಗಣ ದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಬೆಟ್ಟಂಪಾಡಿ ಗ್ರಾ.ಪಂ ಕಚೇರಿ ಸಭಾಂಗಣ ದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಶಾಂತಿಗೋಡು ಗ್ರಾಮ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಬೆಳಿಗ್ಗೆಯಿಂದ ದೈವಗಳ ನೇಮೋತ್ಸವ, ರಾತ್ರಿ ೧೦ಕ್ಕೆ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಬಲಿ ಹೊರಟು ಉತ್ಸವ, ೧೦.೩೦ರಿಂದ ಶ್ರೀ ಗಣಪತಿ ಹೋಮ, ರಾತ್ರಿ ೮ರಿಂದ ಬಲಿ ಹೊರಟು ಉತ್ಸವ, ೯.೩೦ರಿಂದ ಬ್ರಹ್ಮರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ, ೧೦ರಿಂದ ಮಹಿಮೆದ ಉಳ್ಳಾಲ್ದಿ-ತುಳು ಯಕ್ಷಗಾನ
ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೮.೪೫ಕ್ಕೆ ಗೊನೆ ಮುಹೂರ್ತ, ೯.೩೦ರಿಂದ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ, ಬಜತ್ತೂರು ಗುತ್ತಿನ ನಾಗತಂಬಿಲ, ೧೦ಕ್ಕೆ ತೋರಣ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೭ಕ್ಕೆ ಚಕ್ರವರ್ತಿ ಕೊಡಮಣಿತ್ತಾಯ, ಶಿರಾಡಿ ದೈವಗಳ ಭಂಡಾರ ಬರುವುದು, ೮ಕ್ಕೆ ರಂಗಪೂಜೆ, ೮.೩೦ಕ್ಕೆ ಶ್ರೀ ದೇವರ ಬಲಿ ಹೊರಡುವುದು, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ
ಕದಂಬಾಡಿ ಇದುಪ್ಪಾಡಿ ಮಂಜಕೊಟ್ಯ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ನಾಗಬ್ರಹ್ಮ ದೈವದ ನೇಮ, ಕೆದಂಬಾಡಿ ಗ್ರಾಮದೈವ ಶ್ರೀ ಶಿರಾಡಿ ದೈವದ ನೇಮೋತ್ಸವ
ನರಿಮೊಗರು ಗ್ರಾಮದ ಕೈಪಂಗಳ ಬಾರಿಕೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬೆಳಿಗ್ಗೆ ೮ರಿಂದ ಗಣಹೋಮ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ೧೨ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ೧ರಿಂದ ಅನ್ನಸಂತರ್ಪಣೆ, ಸಂಜೆ ೬ರಿಂದ ಕಲ್ಲುರ್ಟಿ ನೇಮ, ರಾತ್ರಿ ೮.೩೦ರಿಂದ ಭಂಡಾರ ತೆಗೆದು ಉಳ್ಳಾಕುಲು-ಕೊಡಮಣಿತ್ತಾಯ, ಪರಿವಾರ ದೈವಗಳ ನೇಮೋತ್ಸವ
ಅಂಕತ್ತಡ್ಕ ಕೋಟಿ ಚೆನ್ನಯ ನಗರದ ಶ್ರೀ ಬ್ರಹ್ಮ ಬೈದೇರುಗಳ ಪೂಂಜಿರೋಟು ನೇತ್ರಾವತಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ
ನೆಹರೂನಗರ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಬೆಳಿಗ್ಗೆ ೯ಕ್ಕೆ ಪುತ್ತೂರು ತುಳುಕೂಟದಿಂದ ತುಳುವರ ಸಂಘ ಉದ್ಘಾಟನೆ, ಕೆಡ್ಡಸ ಆಚರಣೆ
ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಸಂಜೆ ೫ಕ್ಕೆ ನೇಮೋತ್ಸವದ ಪೂರ್ವಭಾವಿ ಸಭೆ
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಶ್ರೀ ದೇವಿಯ ಕಲಶ ಪ್ರತಿಷ್ಠೆ, ಭಜನೆ, ಉದಯ ಪೂಜೆ, ಮಧ್ಯಾಹ್ನ ೧ಕ್ಕೆ ಶ್ರೀ ದೇವಿಯ ಮಹಾಪೂಜೆ, ಸಂಜೆ ೬ಕ್ಕೆ ಭಜನೆ ಮಂಗಲೋತ್ಸವ, ರಾತ್ರಿ ೮ಕ್ಕೆ ಶ್ರೀ ದೇವಿಯ ಮಹಾಪೂಜೆ
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡದಲ್ಲಿ ಜಾತ್ರಾ ಮಹೋತ್ಸವ, ಸಂಜೆ ೬ರಿಂದ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಸಂಕ್ರಮಣ ತಂಬಿಲ ಸೇವೆ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್