ಕುರಿಂಜ ಕುಂಟಾಪು ವರ್ಣರ ಪಂಜುರ್ಲಿ, ಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

0

ಅರಿಯಡ್ಕ: ಭೂಮಿಯಲ್ಲಿರುವುದೆಲ್ಲಾ ಭಗವಂತನ ಅಧೀನದಲ್ಲಿದೆ. ಭಗವಂತನ ದಯೆ ಇಲ್ಲದಿದ್ದರೆ ಹುಲ್ಲುಕಡ್ಡಿ ಕೂಡ ಅಲ್ಲಾಡಲು ಸಾಧ್ಯವಿಲ್ಲ. ಜಗತ್ತಿನಲ್ಲಿ ತ್ಯಾಗಿಗಳೇ ಶ್ರೇಷ್ಠರು. ಅವರಲ್ಲಿ ಸ್ವಾರ್ಥಕ್ಕೋಸ್ಕರ ಚಿಂತನೆ ಇಲ್ಲ. ವ್ಯಕ್ತಿಯ ವಿದ್ವತ್‌ಗಿಂತ ಅನುಭವವೇ ಮುಖ್ಯ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.


ಫೆ.10ರಂದು ಕುರಿಂಜ ಕುಂಟಾಪು ಶ್ರೀವರ್ಣರ ಪಂಜುರ್ಲಿ ಹಾಗೂ ಪರಿವಾರದ ದೈವಗಳ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ, ನೂತನ ಶಾಖಾ ತರವಾಡುಮನೆಯ ಗೃಹಪ್ರವೇಶೋತ್ಸವ ಹಾಗೂ ದೈವಗಳ ನೇಮೋತ್ಸವದ ಪ್ರಯುಕ್ತ ಶ್ರೀರಾಮ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ದೃಢ ನಂಬಿಕೆ ಇದ್ದರೆ ಮಾತ್ರ ದೇವರನ್ನು ಕಾಣಲು ಸಾಧ್ಯ. ದೇವರು ಇದ್ದಾನೆ ಎಂಬ ಭಾವನೆಯಿಂದ ಅರ್ಚನೆ ಮಾಡಿದರೆ ಮಾತ್ರ ನಮ್ಮೊಳಗಿರುವ ದೇವರನ್ನು ಕಾಣಲು ಸಾಧ್ಯ. ನಮ್ಮಲ್ಲಿ ಅಧ್ಯಾತ್ಮಿಕ ಚಿಂತನೆಗಳು ನಿರಂತರ ನಡೆಯಲಿ. ನಾವೆಲ್ಲ ಧಾರ್ಮಿಕ ಸಂಪ್ರದಾಯವನ್ನು ಪಾಲಿಸಬೇಕು. ಈ ತರವಾಡು ಮನೆ ನಾಡಿನ ಸಮಸ್ತರಿಗೂ ಮಾದರಿ ಮನೆಯಾಗಲಿ ಎಂದು ಅವರು ಹಾರೈಸಿದರು.


ಮಾದರಿ ತರವಾಡು-ಜಗನ್ನಿವಾಸ ರಾವ್:

ದೀಪ ಪ್ರಜ್ವಲನೆ ನೆರವೇರಿಸಿದ ವಾಸ್ತು ಶಿಲ್ಪಿ ಪಿ.ಜಿ ಜಗನ್ನಿವಾಸ ರಾವ್ ಪುತ್ತೂರುರವರು ಮಾತನಾಡಿ ಈ ತರವಾಡು ಎಲ್ಲರಿಗೂ ಮಾದರಿಯಾಗಿದೆ. ಇದರ ಸದಸ್ಯರು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಕೆಲಸ ಕಾರ್ಯವನ್ನು ಮಾಡಿದ್ದು ಎಲ್ಲಿಯೂ ಆಡಂಬರ ಕಂಡುಬಂದಿಲ್ಲ. ಆಸಕ್ತಿ ಶ್ರದ್ಧೆ ಜನರಲ್ಲಿ ಇವತ್ತಿಗೆ ಮಾತ್ರ ಇರದೇ ಮುಂದಿನ ದಿನಗಳಲ್ಲಿ ಕೂಡ ಇರಲಿ ಎಲ್ಲಾ ದೈವೆಚ್ಛೆ. ನಮ್ಮದೇನೂ ಇಲ್ಲ ಎಂದು ಹೇಳಿ, ಕ್ಷೇತ್ರದ ಘನತೆ ಗೌರವವನ್ನು ಕಾಪಾಡಿಕೊಂಡು ಬನ್ನಿ ಎಂದು ಶುಭ ಹಾರೈಸಿದರು.


ಶ್ರದ್ಧೆ ಮತ್ತು ವಿನಯ ಈ ಕ್ಷೇತ್ರದಲ್ಲಿದೆ-ಕುಂಬ್ರದುರ್ಗಾ ಪ್ರಸಾದ್ ರೈ:

ವಕೀಲರು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ ಇಲ್ಲಿಯ ಜನರಲ್ಲಿ ಶ್ರದ್ಧೆ ಮತ್ತು ವಿನಯ ಇದೆ. ಮನುಷ್ಯರಲ್ಲಿ ಸಂಸ್ಕೃತಿ ಸಂಸ್ಕಾರ ತಿಳುವಳಿಕೆಗಳು ತುಂಬಿದಾಗ ಮಾನವ ಬಾಗುತ್ತಾನೆ. ಸಜ್ಜನರ ಸಂಘದಿಂದ ನಮ್ಮ ವಿದ್ವತ್ತು ಹೆಚ್ಚಾಗುತ್ತದೆ. ತರವಾಡು ಮನೆಯ ಸಂಪರ್ಕ ನಿರಂತರವಾಗಿರಲಿ. ಇಲ್ಲಿ ಶಕ್ತಿ ಇದೆ. ಇಲ್ಲಿ ನಾವು ಬಾಗುವ ಅವಶ್ಯಕತೆ ಇದೆ ಎಂದು ಹೇಳಿ ಶುಭಹಾರೈಸಿದರು.


ದೈವ ದೇವರುಗಳ ಆಶೀರ್ವಾದದಿಂದ ಸುಂದರ ತರವಾಡು- ಸತೀಶ್ ಮಣಿಯಾಣಿ ಕೊಪ್ಪಳ:

ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಣಿಯಾಣಿ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ೧೨ ತಿಂಗಳು ೧೨ ದಿನಗಳಲ್ಲಿ ತರವಾಡಿನ ಕೆಲಸ ಕಾರ್ಯಗಳು ಮುಗಿದಿವೆ. ಇದಕ್ಕೆ ಮೂಲ ಕಾರಣ ತರವಾಡಿನ ಪ್ರತಿಯೊಬ್ಬ ಸದಸ್ಯನ ಅವಿರತ ಶ್ರಮ. ಬಂಧು ಮಿತ್ರರ ಪ್ರೋತ್ಸಾಹ ಹಾಗೂ ಹಿರಿಯರ ಆಶೀರ್ವಾದ ಎಂದು ಹೇಳಿ, ತರವಾಡಿನ ಇತಿಹಾಸದ ಪುಟಗಳನ್ನು ತಿಳಿಸಿದರು.


ತರವಾಡು ಮನೆ ಸರ್ವರ ಸಹಕಾರದಿಂದ ಸಾಧ್ಯವಾಗಿದೆ- ಸೀತಾರಾಮ ಮಣಿಯಾಣಿ ಕೂಟ್ಲುಂಗಾಲು:

ಸಭಾಧ್ಯಕ್ಷತೆ ವಹಿಸಿದ್ದ ಶ್ರೀವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ಟ್ರಸ್ಟ್ ಕುರಿಂಜಾ ಕುಂಟಾಪು ಇದರ ಅಧ್ಯಕ್ಷ ಸೀತಾರಾಮ ಮಣಿಯಾಣಿ ಕೂಟ್ಲುಂಗಾಲು ಮಾತನಾಡಿ ತರವಾಡು ಮನೆ ಮತ್ತು ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠೆ ಕಾರ್ಯಗಳಿಂದ ಮನಸ್ಸು ಉಲ್ಲಾಸಿತವಾಗಿದೆ. ದೈವ ದೇವರುಗಳ ಸೇವೆ ಮಾಡಲು ಕುಟುಂಬಿಕರು ನನಗೊಂದು ಅವಕಾಶ ಕೊಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿ ಮುಂದೆಯೂ ಸರ್ವರ ಸಹಕಾರ ಕೋರಿದರು.


ಕೋಡಿಯಲಾರ್ ಚಾರಿಟೇಬಲ್ ಟ್ರಸ್ಟ್ ಕುರಿಂಜ ತರವಾಡು ಮನೆಯ ಕಾರ್ಯದರ್ಶಿ ವಾಸು ಮಣಿಯಾಣಿ ಕುರಿಂಜ, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಏಳ್ನಾಡು ದೈವ ವ್ಯಾಘ್ರ ಚಾಮುಂಡಿ ಕುರಿಂಜ ತರವಾಡು ಇದರ ಪ್ರಧಾನ ಪರಿಚಾರಕ ರವೀಂದ್ರ ಮಣಿಯಾಣಿ ನಡುಮನೆ, ಗ್ರಾಮದೈವ ಧೂಮಾವತಿ ದೈವಸ್ಥಾನದ ಪ್ರಧಾನ ಪರಿಚಾರಕ ಸದಾಶಿವ ಮಣಿಯಾಣಿ ಕುತ್ಯಾಡಿ, ಮಹಾವಿಷ್ಣುಮೂರ್ತಿ ದೈವಸ್ಥಾನ ಮಾವಿಲಕೊಚ್ಚಿ ಇದರ ಪ್ರಧಾನ ಪರಿಚಾರಕ ಅಚ್ಚುತ ಮಣಿಯಾಣಿ, ಮಹಾವಿಷ್ಣುಮೂರ್ತಿ ದೈವಸ್ಥಾನ ಪೊನ್ನೆತ್ತಳ್ಕ ಇದರ ಪ್ರಧಾನ ಪರಿಚಾರಕ ಚೆರಿಯ ಕುಂಞ ಮಣಿಯಾಣಿ ಪೊನ್ನೆತ್ತಳ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಾಲಿಂಗ ಮಣಿಯಾಣಿ ಕುಂಟಾಪು, ನಾರಾಯಣ ಮಣಿಯಾಣಿ ಕೊಪ್ಪಳ, ರವಿಶಂಕರ್ ಯಾದವ್, ಶ್ರೀಧರ ಸಂಪ್ಯ, ವಿನೋದ್ ಏವಂದೂರು, ವಿನೋದ್ ಕುಂಟಾಪು, ಸುಽರ್ ಕೂಟ್ಲುಂಗಾಲು, ಸುಂದರ ಮಣಿಯಾಣಿ, ಲೋಕೇಶ್ ಕುಂಟಾಪು, ಉದಯ ಮಣಿಯಾಣಿ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಶ್ರೀಕೃಷ್ಣ ಭಜನಾ ಮಂದಿರ ಕೌಡಿಚಾರು ಇದರ ಗೌರಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮತ್ತು ಸಿಬ್ಬಂದಿಗಳು, ಪುರೋಹಿತರಾದ ಸುಬ್ರಹ್ಮಣ್ಯ ಭಟ್, ಕುಂಬ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶೇಖರ ರೈ, ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಸಾವಿತ್ರಿ ಪೊನ್ನೆತ್ತಳ್ಕ, ಸದಾನಂದ ಮಣಿಯಾಣಿ ಕುರಿಂಜ ಮೂಲೆ ಮುತ್ತಿತರರು ಭಾಗವಹಿಸಿದ್ದರು. ಆರಾಧ್ಯಕೃಷ್ಣ ಪ್ರಾರ್ಥಿಸಿ, ನಳಿನಿ ಕೃಷ್ಣ ಮಣಿಯಾಣಿ ಸ್ವಾಗತಿಸಿದರು. ಸಜಿತ್ ಕೊಪ್ಪಳ ವಂದಿಸಿ ಶಿಕ್ಷಕ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಜನರಿಗೆ ಅನ್ನದಾನ ಅಚ್ಚುಕಟ್ಟಾಗಿ ನಡೆಯಿತು. ರಾತ್ರಿ ಶ್ರೀವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.

ದೈವಸ್ಥಾನದ ಕೆಲಸ ಕಾರ್ಯ ನಿರ್ವಹಿಸಿದ ಮಹನೀಯರಿಗೆ ಸನ್ಮಾನ


ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ವಾಸ್ತು ಶಿಲ್ಪಿ ಪಿ.ಜಿ ಜಗನ್ನಿವಾಸ ರಾವ್ ಪುತ್ತೂರು, ಇಂಜಿನಿಯರ್ ನವೀನ್ ಕಕ್ಕೂರು, ಲಿಂಗಪ್ಪ ಆಚಾರ್ಯ ಚೆಲ್ಯಡ್ಕ, ಶೇಷಪ್ಪ ಗೌಡ, ಕೃಷ್ಣಪ್ಪ ಅಜಿಲ, ರವಿ ಅಜಿಲ, ಬಾಲಕೃಷ್ಣ ಮಡಿವಾಳ, ಚಂದ್ರಶೇಖರ ಟಾಂಡಿಯಡ್ಕ, ವಾಸು ಮಣಿಯಾಣಿ ಕುರಿಂಜ, ಸುರೇಶ್ ಕಡಬ, ಹರೀಶ್ ಉಬ್ರಂಗಳ, ಕುಮಾರ ಮುಡಿಪಿನಡ್ಕ, ಜ್ಯೋತಿಷ್ಯ ಶಶಿಧರ ಕುಟ್ಟಿಕೊಲು, ದಿನೇಶ್ ಗೌಡ ಮಿತ್ತಡ್ಕ, ದಯಾನಂದ ವಿನಾಯಕ ನಗರ, ಯತೀಶ್ ಕುಲಾಲ್ ಕೋರ್ಮಂಡ, ರವಿ ರೈ ಗುಂಡ್ಯಡ್ಕ, ಶೇಖರ ಪೂಜಾರಿ ಕುರಿಯ ದರ್ಬೆತಡ್ಕ, ಚಂದ್ರಶೇಖರ ಪಾಂಡಿಯಡ್ಕ, ಈಊಇ ಬಳಗ ಅಧ್ಯಕ್ಷ ಹರಿಪ್ರಸಾದ್ ಬೆಟ್ಟಂಪಾಡಿ, ವಕೀಲ ಆದರ್ಶ್ ಪುತ್ತೂರುರವರನ್ನು -ಲಪುಷ್ಪ ನೀಡಿಶಾಲು ಹೊದಿಸಿಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here