ಜೆ.ಇ.ಇ. ಮೈನ್ಸ್ ಪ್ರವೇಶ ಪರೀಕ್ಷೆ : ಇಂದ್ರಪ್ರಸ್ಥ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

0

ಉಪ್ಪಿನಂಗಡಿ: ರಾಷ್ಟ್ರಮಟ್ಟದ ಜೆ.ಇ.ಇ. ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.


ದೇಶದ ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆ ಬರೆದ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ 22 ವಿದ್ಯಾರ್ಥಿಗಳಲ್ಲಿ ಉರುವಾಲು ನಿವಾಸಿ ಮನೋಹರ ರಾವ್ ಎ. ಮತ್ತು ಆಶಾಲತ ದಂಪತಿಯ ಪುತ್ರಿ ಕವನ ರಾವ್ (97.2 ಪರ್ಸಂಟೈಲ್) , ಉಪ್ಪಿನಂಗಡಿ ನಿವಾಸಿ ಅಬ್ದುಲ್ ಲತೀಫ್ ಕೆ.ಐ. ಮತ್ತು ಅಫ್‌ಸತ್ ಎಚ್. ಯು. ದಂಪತಿಯ ಪುತ್ರಿ ಅಫ್ರ (90.1 ಪರ್ಸಂಟೈಲ್), ನೆಕ್ಕಿಲಾಡಿ ನಿವಾಸಿ ಕೃಷ್ಣ ಯು. ಮತ್ತು ವಿಮಲ ದಂಪತಿಯ ಪುತ್ರ ಯಕ್ಷಿತ್ (86.4 ಪರ್ಸಂಟೈಲ್), ಪೆರಾಬೆ ನಿವಾಸಿ ವೀರಪ್ಪ ಗೌಡ ಮತ್ತು ನಳಿನಾಕ್ಷಿ ಕೆ. ದಂಪತಿಯ ಪುತ್ರಿ ಪ್ರಾಪ್ತಿ ಪಿ.ವಿ. (85.3 ಪರ್ಸಂಟೈಲ್), ಕೊಯಿಲ ನಿವಾಸಿ ಮುತ್ತಪ್ಪ ಗೌಡ ಮತ್ತು ವೇದಾವತಿ ಕೆ. ದಂಪತಿಯ ಪುತ್ರ ಕೌಶಿಕ್ ಎಂ.ಕೆ. (82.2 ಪರ್ಸಂಟೈಲ್) ಪಡೆದಿದ್ದಾರೆ.


ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ. ಅರ್ಹತೆಯನ್ನು ಪಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here