ಕಾಣಿಯೂರು: ನಾವು ಮನುಜರು ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ಹಬ್ಬಗಳು ಇದರ ಮಹತ್ವವನ್ನು ತಿಳಿಸುವ ಉದ್ದೇಶಕ್ಕಾಗಿ ಕುದ್ಮಾರು ಸ. ಉ. ಹಿ. ಪ್ರಾ ಶಾಲೆಯಲ್ಲಿ ಕೆಡ್ಡಸ ಆಚರಣೆಯನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೂರ್ಣಿಮಾ ಕೂಂಕ್ಯ ಅವರು ಮಾತನಾಡಿ, ಕೆಡ್ಡಸ ಆಚರಣೆಯ ಹಿಂದೆ ಇರುವ ವಿಶಿಷ್ಟ ನಂಬಿಕೆಗಳು, ವಿವಿಧ ಕ್ರಮಗಳು ಇವುಗಳ ಬಗ್ಗೆ ಮಾಹಿತಿ ನೀಡಿದರು.
ಜೀವನ ಅವತಾರ ವಾರ್ಷಿಕ ಅವತಾರ ಇವುಗಳ ಸಂದರ್ಭದಲ್ಲಿ ನಡೆಯುವಂತಹ ಆಚರಣೆಗಳನ್ನು ಆಚರಿಸುವುದರ ಹಿಂದೆ ಇರುವ ವೈಜ್ಞಾನಿಕ ಹಿನ್ನೆಲೆಯನ್ನು ವಿವಿಧ ಪಾಡ್ದನಗಳ ಮೂಲಕ ಅರ್ಥಗರ್ಭಿತವಾಗಿ ತಿಳಿಸಿದರು.
ಕೆಡ್ಡಸದ ಮೂರನೇ ದಿನ ಭೂಮಿ ತಾಯಿಗೆ ಅರ್ಪಿಸುವ ಹಾಗೂ ಮಾಡಲಾಗುವ ಎಣ್ಣೆ ಬಿಡುವ ಶಾಸ್ತ್ರ,ದ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲಾಯಿತು. ಪ್ರತಿ ಆಚರಣೆಯ ಹಿಂದೆ ಇರುವ ಸದುದ್ದೇಶದ ಸಾರವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ದೇವರಾಜ್ ನೂಜಿ ವಹಿಸಿದ್ದರು. ಕಡಬ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಜಾತಾ ಬಿ ಸ್ವಾಗತಿಸಿ ,ಶಿಕ್ಷಕಿ ಪ್ರಿಯಾಂಕ ವಂದಿಸಿದರು. ಮುಖ್ಯ ಗುರುಗಳಾದ ಕುಶಾಲಪ್ಪ.ಬಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿಸಿದರು. ಶಿಕ್ಷಕಿ ಸುಜಾತಾ ಎ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಎಸ್ ಡಿ ಎಂ ಸಿ ಸದಸ್ಯರು ಶಿಕ್ಷಕ ವೃಂದದವರು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.