ಜೆಇಇ ಮೈನ್ಸ್ 2025 – ಅಂಬಿಕಾದ ಭುವನ್ ರೈ ತಾಲೂಕಿಗೆ ಪ್ರಥಮ

0

26 ವಿದ್ಯಾರ್ಥಿಗಳಿಗೆ 90ಕ್ಕಿಂತಲೂ ಅಧಿಕ ಪರ್ಸೆಂಟೈಲ್


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಇಂಜಿನಿಯರಿಂಗ್ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ ಜೆಇಇ ಮೈನ್ಸ್‌ನಲ್ಲಿ ಉತ್ತಮ ಸಾಧನೆಗೈದಿದ್ದು ೨೬ ವಿದ್ಯಾರ್ಥಿಗಳು ೯೦ಕ್ಕಿಂತ ಅಧಿಕ ಪರ್ಸೆಂಟೈಲ್ ದಾಖಲಿಸಿದ್ದಾರೆ.


ಬಂಟ್ವಾಳ ಪುಣಚದ ವಿನೋದ್ ಪ್ರಸಾದ್ ರೈ ಮತ್ತು ಪೂರ್ಣಿಮಾ ಎ ದಂಪತಿಯ ಪುತ್ರ ಭುವನ್ ರೈ (೯೯.೩೨), ಪುತ್ತೂರು ನರಿಮೊಗರಿನ ರಘುನಾಥ್ ಬಿ ಎಸ್ ಮತ್ತು ತಾರಾ ಬಿ ಸಿ ದಂಪತಿಯ ಪುತ್ರ ತೇಜಸ್ ಎಸ್ ಆರ್ (೯೮.೬೨), ಪುತ್ತೂರು ನೆಹರು ನಗರದ ರಾಘವೇಂದ್ರ ನಾಯಕ್ ಮತ್ತು ಲಕ್ಷ್ಮಿ ನಾಯಕ್ ದಂಪತಿಯ ಪುತ್ರ ಸತ್ಯಪ್ರಸಾದ್ ನಾಯಕ್ (೯೮.೦೯), ಬಂಟ್ವಾಳ ಕಡೇಶಿವಾಲಯದ ನರಸಿಂಹ ರಾವ್ ಮತ್ತು ಸಂಧ್ಯಾ ರಾವ್ ದಂಪತಿಯ ಪುತ್ರ ಆದಿತ್ಯ ಡಿ ರಾವ್ (೯೭.೬೧), ಉಪ್ಪಿನಂಗಡಿಯ ಕೃಷ್ಣಪ್ಪ ಪೂಜಾರಿ ಮತ್ತು ವನಿತಾ ದಂಪತಿಯ ಪುತ್ರ ವೈಶಾಕ್ ಕೆ.ವಿ (೯೭.೩೦), ಮಡಿಕೇರಿಯ ಅಯ್ಯಣ್ಣ ಎಮ್.ಕೆ ಮತ್ತು ಶರೀನ್ ಬಿ.ಬಿ ದಂಪತಿಯ ಪುತ್ರ ಆರೀನ್ ಅಯ್ಯಪ್ಪ (೯೬.೮೨), ಪುತ್ತೂರು ನೆಹರು ನಗರದ ರೋಹಿತಾಕ್ಷ ಕೆ ಮತ್ತು ಆರತಿ ರೈ ದಂಪತಿಯ ಪುತ್ರ ಅಕ್ಷಯ್ ರೈ (೯೬.೬೮), ಧರ್ಮಸ್ಥಳದ ಎ ಜನಾರ್ಧನ ಗೌಡ ಮತ್ತು ವೀಣಾ ದಂಪತಿಯ ಪುತ್ರ ಎ.ಜೆ ವರುಣ್ (೯೬.೪೫), ಪುತ್ತೂರು ಶಾಂತಿಗೋಡಿನ ನಿರಂಜನ್ ಪೋಳ್ಯ ಮತ್ತು ವೀಣಾ ಕೆ ಎಸ್ ದಂಪತಿಯ ಪುತ್ರ ಇಶಾನ್ ಎಸ್ ಭಟ್ (೯೬.೧೬), ಬೆಂಗಳೂರಿನ ಮೋನಪ್ಪ ಎನ್.ಬಿ ಮತ್ತು ಭಾರತಿ ಕೆ ದಂಪತಿಯ ಪುತ್ರ ಭಜನ್ ನಿಡಿಂಜಿ ಎಮ್. (೯೬.೧೨), ಪುತ್ತೂರು ಹೆಬ್ಬಾರಬೈಲಿನ ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಯ ಪುತ್ರ ಶ್ರೀಶಾ ನಿಡ್ವಣ್ಣಾಯ (೯೫.೩೭), ಬಂಟ್ವಾಳ ಪೆರ್ನೆಯ ಚಂದ್ರಶೇಖರ್ ಎನ್ ಮತ್ತು ವನಿತಾ ದಂಪತಿಯ ಪುತ್ರ ವಿಷ್ಣುಪ್ರಸಾದ್ (೯೫.೩೧), ಪುತ್ತೂರು ಆರ್ಯಾಪಿನ ಹರೀಶ್ ಕಿಣಿ ಕೆ ಮತ್ತು ವಿನಯ ಕಿಣಿ ಕೆ ದಂಪತಿಯ ಪುತ್ರಿ ಕೆ ಅರ್ಚನಾ ಕಿಣಿ (೯೪.೬೫), ಕಾಸರಗೋಡಿನ ರಾಜಗೋಪಾಲ್.ಕೆ ಮತ್ತು ಸವಿತಾ.ಬಿ ದಂಪತಿಯ ಪುತ್ರ ಆದರ್ಶ್ ಟಿ.ಕೆ (೯೪.೨೩), ಬದಿಯಡ್ಕದ ಮಹಬಲೇಶ್ವರ ಭಟ್ ಬಿ ಮತ್ತು ಗೀತಾ ಕುಸುಮ.ಪಿ ದಂಪತಿಯ ಪುತ್ರ ಅಮೋಘ ಕೃಷ್ಣ ಬಿ (೯೪.೦೯), ಪುತ್ತೂರು ಕಾಣಿಯೂರಿನ ಪದ್ಮನಾಭ ಜಿ ಮತ್ತು ಹೇಮಾವತಿ ದಂಪತಿಯ ಪುತ್ರ ಉತ್ತಮ್ ಜಿ (೯೩.೬೮), ಕಾಸರಗೋಡು ಕರೋಪಾಡಿಯ ಪಿ ನಾರಾಯಣ ಭಟ್ ಮತ್ತು ಜಯಶ್ರೀ ದಂಪತಿಯ ಪುತ್ರಿ ಪಾವನ (೯೩.೫೫), ಪುತ್ತೂರು ಬಪ್ಪಳಿಗೆಯ ಚಿದಾನಂದ ಪೂಜಾರಿ ಮತ್ತು ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ.ಎ.ಸಿ (೯೩.೦೮), ಪುತ್ತೂರು ಆರ್ಯಾಪಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್ ವಿ ದುರ್ಗಮಾಲಾ ದಂಪತಿಯ ಪುತ್ರಿ ಸ್ನೇಹಾ ಎಂ (೯೨.೯೩), ಬಂಟ್ವಾಳ ಕೆದಿಲದ ನರಸಿಂಹರಾಜ ಎಂ ಮತ್ತು ಶುಭಲಕ್ಷ್ಮಿ ಎಸ್ ದಂಪತಿಯ ಪುತ್ರ ಅಖಿಲೇಶ್ ಎಂ (೯೨.೫೮), ಕಡಬ ಸವಣೂರಿನ ಕೆ ವಿಷ್ಣು ಶರ್ಮ ಮತ್ತು ಕೆ ಮಧುರಾ ದಂಪತಿಯ ಪುತ್ರ ಕೆ ವಿ ಅಶ್ವಥ್ (೯೨.೩), ಪುತ್ತೂರು ಬೊಳ್ವಾರಿನ ಎನ್ ನಂದಕುಮಾರ್ ಮತ್ತು ಎನ್ ಗೋಮತಿ ದಂಪತಿಯ ಪುತ್ರ ಸಂಜಯ್ ಎನ್ (೯೨.೧೮), ಪುತ್ತೂರು ಆರ್ಯಾಪಿನ ಕೆ ದಿನಕರ ಮತ್ತು ಬಿ ಸುಮತಿ ದಂಪತಿಯ ಪುತ್ರ ಗೌರವ್ ಪಿ ಡಿ (೯೧.೭೫), ಕಾಸರಗೋಡಿನ ರಮೇಶ್ ಭಟ್ ವೈ.ವಿ ಮತ್ತು ಸವಿತಾ ದಂಪತಿಯ ಪುತ್ರ ಅನ್ವಿತ್ ಆರ್ ಭಟ್ (೯೧.೦೫), ವಿಟ್ಲದ ರವಿ.ಪಿ ಮತ್ತು ಪಲ್ಲವಿ ದಂಪತಿಯ ಪುತ್ರ ಶ್ರೀಕಾಂತ್.ಪಿ (೯೦.೬೯), ಪುತ್ತೂರು ಚಿಕ್ಕಮುಡ್ನೂರಿನ ಶ್ರೀನಿವಾಸ ಬಡೆಕಿಲ್ಲಾಯ ಮತ್ತು ರೇಖಾ ಕೆ ವಿ ದಂಪತಿಯ ಪುತ್ರ ಅಜಿತ್ ಕುಮಾರ್ ಕೆ ಎಸ್ (೯೦.೬೬) ಅತ್ಯುತ್ತಮ ಅಂಕ ದಾಖಲಿಸಿ, ಉತ್ತಮ ಸಾಧನೆಯೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.


ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯ, ಸುಚಿತ್ರಾ ಪ್ರಭು, ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಕಿಶೋರ್ ಭಟ್ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here