ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವದ ಆರಂಭ : ಫೆ.13: ಗಡಿನಾಡ ರಥೋತ್ಸವ – ಸಿಡಿಮದ್ದು ಪ್ರದರ್ಶನ

0

ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರ ಮಾರ್ಗದರ್ಶನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರಾಮಹೋತ್ಸವವು ಫೆ.12ರಂದು ಆರಂಭಗೊಂಡಿದ್ದು, ಫೆ.14ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಫೆ.12ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿ ಹೋಮ, ಶ್ರೀ ದೇವಿಯ ಕಲಶ ಪ್ರತಿಷ್ಠೆ, ಉದಯ ಪೂಜೆ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗೆ ವಿವಿಧ ತಂಡಗಳಿಂದ ಭಜನೆ‌ ನಡೆಯಿತು.

ಫೆ.13ರಂದು ಬೆಳಿಗ್ಗೆ ಉದಯ ಪೂಜೆ, ನರಸಿಂಹ ಮಂಡಲ ಪೂಜೆ, ತುಲಾಭಾರ ಸೇವೆ ನಡೆಯಲಿದೆ. ಬೆಳಿಗ್ಗೆ ಗಂಟೆ 10.00ಕ್ಕೆ ಶ್ರೀ ಕೃಷ್ಣಾನುಹಗ್ರಹ ಪುರಸ್ಕೃತ ಹರಿದಾಸ ಶ್ರೀ ಜಯನಂದ ಕುಮಾರ್, ಹೊಸದುರ್ಗ ಇವರಿಂದ ಸೌಗಂಧಿ ಪುಷ್ಪ ಕಥಾ ಕೀರ್ತನ ನಡೆಯಲಿದೆ. ಮಧ್ಯಾಹ್ನ 1.00ಕ್ಕೆ ಶ್ರೀ ದೇವಿಯ ಬಲಿ ಉತ್ಸವ ಪಲ್ಲಕ್ಕಿ ಉತ್ಸವ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 6.00ರಿಂದ ಆಂಜನೇಯ ಸ್ವಾಮಿಗೆ ಮಹಾಪೂಜೆ, ಆಂಜನೇಯಸೇವೆ ನಡೆಯಲಿದೆ.ಸಾಯಂಕಾಲ 7.00ರಿಂದ ಶಾರದ ಆರ್ಟ್ಸ್ ಕಲಾವಿದರು(ರಿ.)ಮಂಜೇಶ್ವರ ಅಭಿನಯಿಸುವ ತುಳು ಹಾಸ್ಯಮಯ ನಾಟಕ ‘ಉತ್ತರ ಕೊರ್ಲೆ’ ನಡೆಯಲಿದೆ.


ರಾತ್ರಿ 10.00ಕ್ಕೆ ಶ್ರೀ ದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಗಡಿನಾಡ ರಥೋತ್ಸವ, ಸಿಡಿಮದ್ಧು ಪ್ರದರ್ಶನ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 12.00ಕ್ಕೆ ಸಿರಿ ಕುಮಾರ ಸೇವೆ, ರಾತ್ರಿ 1.00ರಿಂದ ರಕೇಶ್ವರಿ ದೈವದ ನೇಮೋತ್ಸವ ನಡೆಯಲಿದೆ.

ಫೆ.14ರಂದು ಬೆಳಿಗ್ಗೆ 8.00ಕ್ಕೆ ಉದಯ ಪೂಜೆ, ಭಜನೆ ಮಧ್ಯಾಹ್ನ 1.00ಕ್ಕೆ ಶ್ರೀ ದೇವಿಯ ಮಹಾಪೂಜೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6.00ರಿಂದ ಅಣ್ಣಪ ಪಂಜುರ್ಲಿ ಪರಿವಾರ ದೈವಗಳ ಭಂಡಾರ ಇಳಿದು, ಕೊರತ್ತಿ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 8.00ರಿಂದ ಬಾಲವಿಕಾಸ ಕಲಾವಿದರ ಯಕ್ಷಕಲಾ ಕೇಂದ್ರ ಪೊನ್ನೆತ್ತೂಡು, ಕಯ್ಯಾರು ಇವರಿಂದ ತುಳು ಯಕ್ಷಗಾನ ಬಯಲಾಟ ‘ಕೋಟಿ ಚೆನ್ನಯ’ ನಡೆಯಲಿದೆ.


ರಾತ್ರಿ 9.00ಕ್ಕೆ ಶ್ರೀ ದೇವಿಯ ಮಹಾಪೂಜೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ, ರಾತ್ರಿ 11.00ರಿಂದ ಕಲ್ಲುರ್ಟಿ ಅಣ್ಣಪ ಪಂಜುರ್ಲಿ ದೈವದ ನೇಮೋತ್ಸವ,ರಾತ್ರಿ 12.00ಕ್ಕೆ ಶ್ರೀ ಅಮ್ಮನವರ ದೊಂದಿಸೇವೆ, ಶಕ್ತಿಪೂಜೆ, ಪ್ರಸಾದ ವಿತರಣೆ. ಮಂಗಳಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here