ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕ್ರೀಡಾಕೂಟ, ಕುಟುಂಬ ಸಮ್ಮೇಳನ ಹಾಗೂ ವಿಶೇಷ ಮಹಾಸಭೆ ಬೊಳುವಾರು ಮಹಾವೀರ ವೆಂಚರ್‌ನಲ್ಲಿ ನಡೆಯಿತು.
ವರ್ತಕ ಸಂಘದ ಮಾಜಿ ಅಧ್ಯಕ್ಷ ಜಿ. ಸುರೇಂದ್ರ ಕಿಣಿ ಮಾತನಾಡಿ, ವರ್ತಕರ ವ್ಯವಹಾರ ಅಭಿವೃದ್ಧಿಪಡಿಸಲು ವರ್ತಕ ಸಂಘದ ಬಾಂಧವ್ಯವನ್ನು ಹಾಗೂ ಸಂಘಟನೆಯನ್ನು ಬಲಪಡಿಸಬೇಕಾಗಿದೆ. ಈಗಾಗಲೇ ವರ್ತಕರ ಸಂಘದಿಂದ ನಗರಸಭೆ ಜೊತೆ ಮಾತುಕತೆ ನಡೆಸುವ ಮೂಲಕ ವರ್ತಕರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಾಮನ ಪೈ ಮಾತನಾಡಿ ಸಂಘದ ಮುಂದಿನ ಯೋಜನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ ನಮ್ಮ ಸಂಘಕ್ಕೆ ವಿಶಾಲವಾದ ಕಟ್ಟಡದ ಆವಶ್ಯಕತೆಯನ್ನು ಪಡೆಯುವ ಸಲುವಾಗಿ ದಾನಿಗಳ ನೆರವು ಪಡೆಯುವಂತೆ ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದರು. ಉಪಾಧ್ಯಕ್ಷ ರಮೇಶ್ ಪ್ರಭು ಕಟ್ಟಡದ ಅವಶ್ಯಕತೆ ಬಗ್ಗೆ ತಿಳಿಸಿದರು. ಹಿರಿಯ ಉದ್ಯಮಿ, ವರ್ತಕ ಸಂಘದ ಮಾಜಿ ಅಧ್ಯಕ್ಷ ಕೇಶವ ಪೈ ಸಂದರ್ಭೋಚಿತವಾಗಿ ಮಾತನಾಡಿದರು.
ಬೊಳುವಾರು ಕಾರ್ತಿಕ್ ಎಲೆಕ್ಟ್ರಾನಿಕ್ಸ್ ಮಾಲಕ ಪ್ರಥಮವಾಗಿ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರೂ. ಕೊಡುಗೆ ನೀಡಿದ್ದು ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಮನೋಜ್ ಟಿ.ವಿ. ಸಂಘದ ಚಟುವಟಿಕೆ ಹಾಗೂ ವರದಿ ವಾಚಿಸಿದರು. ವರ್ತಕ ಸಂಘದ ಅಧ್ಯಕ್ಷ ಪಿ. ವಾಮನ್ ಪೈ ಸ್ವಾಗತಿಸಿ ಕಾರ್ಯದರ್ಶಿ ನೌಷದ್ ಸಹಕರಿಸಿದರು. ಉಪಾಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ವಂದಿಸಿದರು. ಕೋಶಾಧಿಕಾರಿ ಉಲ್ಲಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.