ಪುತ್ತೂರು ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಸಂಜೆ ೫.೩೫ಕ್ಕೆ ತೋರಣ ಮುಹೂರ್ತ, ರಾತ್ರಿ ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ
ನೂಜಿಬಾಳ್ತಿಲ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ರಿಂದ ನೂಜಿಬಾಳ್ತಿಲ ಗ್ರಾ.ಪಂ ಗ್ರಾಮಸಭೆ
ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕೋಡಿಂಬಾಡಿ ಗ್ರಾ.ಪಂ ಗ್ರಾಮಸಭೆ
ದಾಸರಮೂಲೆ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೫ಕ್ಕೆ ಹಿರೇಬಂಡಾಡಿ ಗ್ರಾ.ಪಂನ ೧ನೇ ವಾರ್ಡ್, ಅಡೆಕ್ಕಲ್ ಹಿ.ಪ್ರಾ. ಶಾಲೆಯಲ್ಲಿ ೧೧ಕ್ಕೆ ೨ನೇ ವಾರ್ಡ್, ಬೋಳಮೆ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೧.೩೦ಕ್ಕೆ ೩ನೇ ವಾರ್ಡ್‌ನ ವಾರ್ಡುಸಭೆ
ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಅಪರಾಹ್ನ ೨ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಕುಂತೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುಂತೂರು ೧ನೇ ವಾರ್ಡ್‌ನ ವಾರ್ಡುಸಭೆ
ಪಾಂಗ್ಲಾಯಿ ಶ್ರೀ ಶಾಂತಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಂಜೆ ೬ರಿಂದ ಸ್ಥಳ ಶುದ್ಧಿ, ವಾಸ್ತು ಹೋಮ, ವಾಸ್ತು ರಾಕ್ಷೆಘ್ನ ಹೋಮ
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಸಂಪ್ರೋಕ್ಷಣೆ, ನಾಗಾರಾಧನೆ, ರಾತ್ರಿ ೮.೩೦ರಿಂದ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ
ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅಪರಾಹ್ನ ದೊಂಪದ ಬಲಿಯ ಮಾರಿಪೂಜೆ
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಉದಯ ಪೂಜೆ, ಭಜನೆ, ಮಧ್ಯಾಹ್ನ ೧ಕ್ಕೆ ಮಹಾಪೂಜೆ, ದರ್ಶನ ಬಲಿ ಉತ್ಸವ, ಸಂಜೆ ೬ರಿಂದ ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಭಂಡಾರ ಇಳಿದು, ಕೊರತ್ತಿ ದೈವದ ನೇಮೋತ್ಸವ, ರಾತ್ರಿ ೮ರಿಂದ ಕೋಟಿ ಚೆನ್ನಯ ತುಳು ಯಕ್ಷಗಾನ ಬಯಲಾಟ, ೯ರಿಂದ ಮಹಾಪೂಜೆ, ದರ್ಶನ ಬಲಿ ಉತ್ಸವ, ೧೧ರಿಂದ ಕಲ್ಲುರ್ಟಿ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ, ೧೨ಕ್ಕೆ ಶ್ರೀ ಅಮ್ಮನವರ ದೊಂದಿಸೇವೆ, ಶಕ್ತಿಪೂಜೆ
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬೆಳಿಗ್ಗೆ ೮ರಿಂದ ನಿತ್ಯ ವಿಧಿ ಸಹಿತ ಶ್ರೀ ಪೀಠ ಯಂತ್ರಾರಾಧನಾ ವಿಧಾನ, ೧೦.೩೫ಕ್ಕೆ ಶ್ರೀ ನಾಗದೇವರ ಪ್ರತಿಷ್ಠೆ, ಯಕ್ಷಾರಾಧನಾಪೂರ್ವಕ ಯಕ್ಷಪ್ರತಿಷ್ಠೆ, ೧೨.೧೫ಕ್ಕೆ ಧ್ವಜಾರೋಹಣ, ಧ್ವಜ ಪೂಜೆ, ಶ್ರೀಬಲಿ ವಿಧಾನ, ಮಂಟಪ ಪ್ರತಿಷ್ಠೆ, ಯಾಗಮಂಡಲ ಆರಾಧನಾವಿಧಾನ, ಸಂಜೆ ೪.೩೫ಕ್ಕೆ ಶ್ರೀ ಯಕ್ಷಿ ಜ್ವಾಲಾಮಾಲಿನಿ ದೇವಿ ಪ್ರತಿಷ್ಠೆ, ಸಂಜೆ ೫.೩೦ರಿಂದ ಸಭಾ ಕಾರ್ಯಕ್ರಮ, ೫.೩೫ಕ್ಕೆ ಶ್ರೀ ಯಕ್ಷಿ ಪದ್ಮಾವತಿ ದೇವಿ ಪ್ರತಿಷ್ಠೆ, ಜಲಯಾತ್ರಾ ಮಹೋತ್ಸವ, ರಾತ್ರಿ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮ-ಕಲಾಮಯಂ, ಉಡುಪಿ, ೭.೩೦ರಿಂದ ಮಂಗಲಸೂತ್ರ ಬಂಧನ, ೨೪ ಕಲಶ ಅಭಿಷೇಕ, ಮಹಾಪೂಜೆ
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಕುಮಾರಧಾರ ನದಿಯಲ್ಲಿ ಗಂಗಾಪೂಜೆ, ಕಲಶ ಜಲ ಮೆರವಣಿಗೆ, ರಾತ್ರಿ ರಂಗಪೂಜೆ
ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಿಗ್ಗೆ ೧೦ಕ್ಕೆ ರಾಮಕುಂಜ, ಕೊಯಿಲ ಜನಪರ ಹೋರಾಟ ಸಮಿತಿಯಿಂದ ಕೊಯ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್