ಬಳಂತಿಮೊಗರು: ಶ್ರೀ ಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ನೆತ್ತರ್ ಕಣ್, ಸತ್ಯ ದೇವತೆ, ರಕ್ತೇಶ್ವರಿ, ಹಾಗೂ ಪರಿವಾರ ದೈವಗಳ ದೈವಸ್ಥಾನದ ನೇಮೋತ್ಸವವು ಫೆ.21 ರಿಂದ 23 ರವರೆಗೆ ನಡೆಯಲಿದ್ದು, ನೇಮೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮ ಫೆ.14 ರಂದು ಬಳಂತಿಮೊಗರು ದೈವಸ್ಥಾನದ ಸನ್ನಿಧಾನದಲ್ಲಿ ನಡೆಯಿತು.
ಪ್ರಾರಂಭದಲ್ಲಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಊರಿನವರು ಪಾಲ್ಗೊಂಡಿದ್ದರು.

ಫೆ.21 ರಂದು ಸ್ಥಳ ಶುದ್ಧಿ, ಗಣಪತಿ ಹೋಮ, ನಾಗ ತಂಬಿಲ, ಹರಿಸೇವೆ, ದೈವಗಳ ತಂಬಿಲ ಸೇವೆ, ಧೂಮಾವತಿ ದೈವದ ಭಂಡಾರ ತೆಗೆಯುವುದು, ಪುದಕ್ಕೋಲ, ಗುಳಿಗ ದೈವದ ನೇಮ, ಪಂಜುರ್ಲಿ ದೈವದ ನೇಮ ನಡೆಯಲಿದೆ. ಫೆ.22 ರಂದು ಧೂಮಾವತಿ ದೈವದ ನೇಮ, ಅನ್ನಸಂತರ್ಪಣೆ, ಮಹಿಷಂದಾಯ ದೈವದ ನೇಮ, ರಕ್ತೇಶ್ವರಿ ದೈವದ ನೇಮ ನಡೆಯಲಿದೆ.
ಫೆ.23 ರಂದು ಮಲರಾಯ ದೈವದ ಭಂಡಾರ ತೆಗೆಯುವುದು, ನಂತರ ಮಲರಾಯ ದೈವದ ನರ್ತನಾದಿ ಉತ್ಸವ, ಅನ್ನದಾನ ಸೇವೆ, ನೆತ್ತೆರ್ ಕಣ್ ದೈವದ ಭಂಡಾರ ಹೊರಡುವುದು, ಅನ್ನಸಂತರ್ಪಣೆ, ನೆತ್ತೆರ್ ಕಣ್ ದೈವದ ನೇಮೋತ್ಸವ, ಸತ್ಯ ದೇವತೆ ದೈವದ ನೇಮೋತ್ಸವ, ಕಲ್ಲುರ್ಟಿ ಕಲ್ಕುಡ ದೈವದ ನೇಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸಿ, ಶ್ರೀ ದೇವತಾ ಕಾರ್ಯದಲ್ಲಿ ಭಾಗವಹಿಸಿ, ದೈವದ ಗಂಧ ಪ್ರಸಾದ ಸ್ವೀಕಾರ ಮಾಡಿ, ತನು, ಮನ, ಧನದೊಂದಿಗೆ ಸಹಕರಿಸಬೇಕಾಗಿ ಆಡಳಿತ ಮಂಡಳಿ ತಿಳಿಸಿದ್ದಾರೆ.