ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ತಾಳಮದ್ದಳೆಯು ಫೆ.15ರಂದು ಸಂಜೆ ಬೊಳುವಾರು ಆಂಜನೇಯ ಮಂತ್ರಾಲಯದ ವಠಾರದಲ್ಲಿ “ಕರ್ಣ ಭೇದನ” ಆಖ್ಯಾನ ದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಆನಂದ ಸವಣೂರು, ತೆಂಕಬೈಲು ಗೋಪಾಲಕೃಷ್ಣ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ( ಭಾಸ್ಕರ್ ಶೆಟ್ಟಿ ಸಾಲ್ಮರ ಮತ್ತು ವಿ.ಕೆ.ಶರ್ಮ ಅಳಿಕೆ), ಕರ್ಣ ( ಗುಡ್ಡಪ್ಪ ಬಲ್ಯ ), ಕುಂತಿ ( ಮಾಂಬಾಡಿ ವೇಣುಗೋಪಾಲ ಭಟ್ ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ ವಂದಿಸಿದರು. ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ ಪ್ರಾಯೋಜಿಸಿದ್ದರು.