ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾಗಿದ್ದು ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಸಿ.ಕೆ.ಬಸವರಾಜ್, ಮಂಜುಳಾ ದಂಪತಿ ಪುತ್ರಿಯರಾದ ಬಿ.ಸಿಂಧು ಮತ್ತು ಬಿ.ಪೂರ್ಣಿಮ ಅವರು ಕಾನೂನು ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2022-23ನೇ ಸಾಲಿನ ಮಾಸ್ಟರ್ ಆಫ್ ಲಾ ಪರೀಕ್ಷೆಯಲ್ಲಿ ಬಿ.ಸಿಂಧು ಅವರು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಅವರ ಸಹೋದರಿ ಬಿ.ಪೂರ್ಣಿಮಾ ಅವರು ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ತೃತೀಯ ರ‍್ಯಾಂಕ್ ಗಳಿಸಿದ್ದಾರೆ. ಇವರಿಬ್ಬರು ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮತ್ತು ಸಿ.ಎನ್ ಮಂಜುಳ ದಂಪತಿ ಪುತ್ರಿಯರು.