ಉಪ್ಪಿನಂಗಡಿ: ಇಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷ ದಯಾನಂದ ಸರೋಳಿ ಶನಿವಾರದಂದು ಸಹಕಾರಿ ಧುರೀಣರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಸಕ್ತ ಶತಮಾನೋತ್ಸವನ್ನು ಆಚರಿಸಿಕೊಳ್ಳುತ್ತಿದೆ. ಅಂತೆಯೇ ದೇಶದ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮಶತಮಾನೋತ್ಸವೂ ಈ ವರ್ಷವಾಗಿದ್ದು, ಈ ಸುಸಂದರ್ಭದಲ್ಲಿ ಸಂಘ ಸಂಸ್ಕಾರ ಪಡೆದು ಸಮಾಜದಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿ ಇದೀಗ ಪ್ರತಿಷ್ಠಿತ ಸಹಕಾರಿ ಸಂಘದ ಚುಕ್ಕಾಣಿ ಹಿಡಿಯುತ್ತಿರುವ ಸುನಿಲ್ ಕುಮಾರ್ ದಡ್ಡು ಹಾಗೂ ದಯಾನಂದ ಸರೋಳಿಯವರಿಗೆ ಎಲ್ಲರ ಸಹಕಾರ ದೊರೆತು ಸಂಘವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಲು ಸಾಧ್ಯವಾಗಲಿ ಎಂದರು.
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುನಿಲ್ ಕುಮಾರ್ ದಡ್ಡು ಮಾತನಾಡಿ, ಬಹುದೊಡ್ಡ ಹೊಣೆಗಾರಿಕೆಯನ್ನು ನಾನು ಸ್ವೀಕರಿಸಿದ್ದು, ಇದಕ್ಕೆ ಕರ್ತವ್ಯಬದ್ಧನಾಗಿ ದುಡಿಯುತ್ತೇನೆ. ಸಹಕಾರಿ ಸಂಘವನ್ನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಎಲ್ಲಾ ಪೂರ್ವಾಧ್ಯಕ್ಷರುಗಳ ಸಲಹೆ ಸೂಚನೆಯನ್ನು ಪಡೆದು ಎಲ್ಲರ ಒಳಿತಿಗಾಗಿ ಶ್ರಮಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಂಘದ ಪೂರ್ವಾಧ್ಯಕ್ಷರಾದ ಪೆಲಪ್ಪಾರು ವೆಂಕಟರಮಣ ಭಟ್, ಚಂದ್ರಶೇಖರ್ ತಾಳ್ತಜೆ, ಕೆ.ಜಿ. ಭಟ್, ಯಶವಂತ ಜಿ., ಕೆ.ವಿ. ಪ್ರಸಾದ್, ನಿರ್ದೇಶಕರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ ಮುಳಿಯ, ರಾಜೇಶ್ ಮುಖಾರಿ, ಶ್ರೀರಾಮ ಪಾತಾಳ, ಗೀತಾ, ಸಂಧ್ಯಾ, ರಾಘವ ನಾಯ್ಕ್, ವಸಂತ ಪಿಜಕ್ಕಳ, ಸುಂದರ್ ಕೆ, ಸದಾನಂದ ಶೆಟ್ಟಿ ಪ್ರಮುಖರಾದ ಹರಿರಾಮಚಂದ್ರ, ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸಾದ್ ಭಂಡಾರಿ , ಶ್ಯಾಮಲಾ ಶೆಣೈ, ಶೌಕತ್ ಅಲಿ, ಯತೀಶ್ ಶೆಟ್ಟಿ , ಅಜೀಜ್ ಬಸ್ತಿಕಾರ್, ಕೈಲಾರು ರಾಜಗೋಪಾಲ ಭಟ್, ರವೀಂದ್ರ ದರ್ಬೆ, ಎ ಗೋಪಾಲ ಹೆಗ್ಡೆ, ಫಾರೂಕ್ ಜಿಂದಗಿ, ಪ್ರಶಾಂತ್ ಪೆರಿಯಡ್ಕ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ಸುಜಾತ ರೈ, ಸದಾನಂದ ಶೆಟ್ಟಿ, ವಿಜಯ ಕುಮಾರ್ ಕಲ್ಲಳಿಕೆ, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಮತ್ತಿತರರು ಭಾಗವಹಿಸಿದರು.