ಜನಪದೀಯ ನಂಬಿಕೆಯ ಉತ್ಸವಗಳು ದೈವರಾಧನೆ- ನಳಿನ್‌ಕುಮಾರ್ ಕಟೀಲ್
ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮಅರಸು ಉಳ್ಳಾಕಲು ದೈವಸ್ಥಾನದಲ್ಲಿ ಶ್ರೀ ಧರ್ಮಅರಸು ಉಳ್ಳಾಕಲು ದೈವಗಳ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ ಫೆ. 15 ರಂದು ಆರಂಭಗೊಂಡಿತು.
ಫೆ.15 ರಂದು ಶ್ರೀ ವೇದಮೂರ್ತಿ ಕೇಶವ ಕಲ್ಲೂರಾಯ ಬಂಬಿಲರವರ ನೇತೃತ್ವದಲ್ಲಿ ಧಾರ್ಮಿಕ ಕಾರ‍್ಯಕ್ರಮಗಳು ಜರಗಿತು, ಬೆಳಿಗ್ಗೆ 9 ರಿಂದ ಶ್ರೀ ಗಣಪತಿ ಹೋಮ, ನಾಗತಂಬಿಲ, ಗೊನೆ ಕಡಿಯುವುದು, ದೈವಗಳ ತಂಬಿಲ, ಬೊಟ್ಟಿ ಭೂತ ತಂಬಿಲ ನಡೆಯಿತು. ಸಂಜೆ ಹಸಿರುವಾಣಿ ಮೆರವಣಿಗೆ ನೇರೊಳ್ತಡ್ಕದಿಂದ ಕಲ್ಲ ಮಾಡದವರೆಗೆ ಅದ್ದೂರಿಯಾಗಿ ನಡೆಯಿತು.
ಜನಪದೀಯ ನಂಬಿಕೆಯ ಉತ್ಸವಗಳು ದೈವರಾಧನೆ- ನಳಿನ್ ಕುಮಾರ್ ಕಟೀಲ್
ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಹಸಿರುವಾಣಿ ಮೆರವಣಿಗೆಯನ್ನು ಉದ್ಘಾಟಿಸಿ, ಬಳಿಕ ಮಾತನಾಡಿ ತುಳುನಾಡಿನ ಜನಪದೀಯ ನಂಬಿಕೆಯ ಉತ್ಸವಗಳು ದೈವರಾಧನೆಗಳು, ದೈವರಾಧನೆ ಮುಖಾಂತರ ಗ್ರಾಮದ ಹಿತಚಿಂತನೆಗಳನ್ನು ನಮ್ಮೆಲ್ಲ ಹಿರಿಯರು ನಂಬಿಕೆಯ ಆಧಾರದಲ್ಲಿ ನಡೆಸಿಕೊಂಡು ಬಂದಿದ್ದರು. ಅದನ್ನು ಉಳಿಸುವ ಕೆಲಸವನ್ನು ನಾವೆಲ್ಲ ಮಾಡುತ್ತಿದ್ದೇವೆ, ಈ ಭಾಗದ ಗ್ರಾಮ ದೈವವಾಗಿರುವ ಶ್ರೀ ಧರ್ಮಅರಸು ಉಳ್ಳಾಕಲು ದೈವಸ್ತಾನದ ಧರ್ಮ ನಡಾವಳಿ ಜಾತ್ರೋತ್ಸವ ದೈವಸ್ಥಾನದ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡರವರ ನೇತೃತ್ರದಲ್ಲಿ ಉತ್ಸವ ಮತ್ತು ಕಾರ‍್ಯಕ್ರಮಗಳು ಯಶಸ್ಸಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ದೈವಸ್ಥಾನದ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡರವರು ಮಾತನಾಡಿ ನಳಿನ್ ಕುಮಾರ್ ಕಟೀಲ್ ರವರು ಸಂಸದರರಾಗಿದ್ದ ಅವಧಿಯಲ್ಲಿ ಸಾರಕರೆ ರಸ್ತೆಯ ಕಾಂಕ್ರೀಟೀಕರಣಕ್ಕೆ ಅನುದಾನವನ್ನು ನೀಡಿದ್ದರು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರುಗಳಾದ ಗಿರಿಶಂಕರ್ ಸುಲಾಯ ದೇವಸ್ಯ, ಸತೀಶ್ ಅಂಗಡಿಮೂಲೆ, ಬಾಲಕೃಷ್ಣ ರೈ ದೇವಸ್ಯ ಸಹಿತ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಮಾಜಿಕ ಮುಖಂಡರುಗಳು, ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.
ಹಸಿರುವಾಣಿ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಗೊಂಬೆ ಕುಣಿತ ಹಾಗೂ ಶ್ರೀ ಮಣಿಕಂಠ ಸಿಂಗಾರಿ ಮೇಳ ಶ್ರೀ ರಾಮನಗರ ರೆಂಜ ಇವರಿಂದ ಚೆಂಡೆವಾದನ ನಡೆಯಿತು. ಸಂಜೆ ಶ್ರೀ ದುರ್ಗಾನಮಸ್ಕಾರ ಪೂಜೆ ಮತ್ತು ಭಜನಾ ಕಾರ‍್ಯಕ್ರಮ ಜರಗಲಿದೆ. ಅನ್ನಪೂರ್ಣ ಅನ್ನಛತ್ರ ಉದ್ಘಾಟನೆ ಸಾರಕರೆಬೀಡು ದೈವಸ್ಥಾನದ ಸಮೀಪ ನಿರ್ಮಿಸಿರುವ ಅನ್ನಪೂರ್ಣ ಅನ್ನಛತ್ರದ ಉದ್ಘಾಟನೆಯನ್ನು ಮಾಜಿ ಸಂಸದ ನಳೀನ್‌ಕುಮಾರ್ ಕಟೀಲ್‌ರವರು ಉದ್ಘಾಟಿಸಿದರು. ಇದೇ ವೇಳೆ ಶ್ರಮದಾನದಲ್ಲಿ ಸಹಕರಿಸಿದ 150 ಮಂದಿಯಲ್ಲಿ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಕೇಸರಿ ಮುಂಡು ಹಾಗೂ ಶಾಲು ನೀಡಿ ಗೌರವಿಸಲಾಯಿತು.
ಭಜನಾ ಕಾರ‍್ಯಕ್ರಮದಲ್ಲಿ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಸವಣೂರು ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಬೆಟ್ಟಂಪಾಡಿ ಇವರುಗಳಿಂದ ಭಜನೆ ನಡೆಯಲಿದೆ. ಸಂಜೆ 7 ರಿಂದ ಶ್ರೀ ಧರ್ಮಅರಸು ಉಳ್ಳಾಕಲು ಮತ್ತು ಪರಿವಾರ ದೈವಗಳ ಕಿರುವಾಳು ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ಆಗಮಿಸಿತು, ರಾತ್ರಿ ಸಾರಕರೆ ಬೆಡಿ ಹಾಗೂ ಅನ್ನಸಂತರ್ಪಣೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ, ಧರ್ಮನಡಾವಳಿಯ ಸಂಚಾಲಕ ಸಾರಕರೆಬೀಡು ದೇವಿಚರಣ್ ಶೆಟ್ಟಿ, ಪ್ರೀತಿ ಎಂ ಶೆಟ್ಟಿ, ಶ್ರದ್ಧಾ ಶೆಟ್ಟಿ, ದಿಲೀಫ್ ಹೆಗ್ಡೆ ಸಾರಕರೆ ಹಾಗೂ ಸಾರಕರೆ ಶ್ರೀ ಧರ್ಮಅರಸು ಉಳ್ಳಾಕಲು ಸೇವಾ ಸಮಿತಿಯವರು ಅತಿಥಿಗಳನ್ನು ಗೌರವಿಸಿದರು.
.