*ಹಿಂಜಾವೇ ಯುವ ಸಮಾವೇಶದಲ್ಲಿ ಜಗದೀಶ್ ಕಾರಂತ್
*ಹಿಂಜಾವೇ ಉತ್ತಮ ಶಕ್ತಿಯಾಗಿ ಬೆಳೆಯಬೇಕು-ಡಾ.ಎಂ.ಕೆ.ಪ್ರಸಾದ್
ಪುತ್ತೂರು:ಭಯೋತ್ಪಾದನೆ, ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಸಹಿತ ಹಲವು ವಿಚಾರಗಳ ಸವಾಲುಗಳ ನಮ್ಮ ಮುಂದಿದೆ.ಅದನ್ನು ಎದುರಿಸಲು ಹಿಂದು ಸಮಾಜ ಜಾಗೃತವಾಗಬೇಕು ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟಕ ಜಗದೀಶ್ ಕಾರಂತ್ ಸಂದೇಶ ನೀಡಿದರು.
ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಫೆ.17ರಂದು ಸಂಜೆ ಬನ್ನೂರು ಕರ್ಮಲದಲ್ಲಿರುವ ಹವ್ಯಕ ಭವನದಲ್ಲಿ ನಡೆದ ‘ಯುವ ಸಮಾವೇಶ’ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಇವತ್ತು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮೂಲಕ ಹಿಂದು ಸಮಾಜಕ್ಕೆ ತೊಂದರೆ ಕೊಡುವ ಕೆಲಸ ಆಗುತ್ತಿದೆ.ಈ ನಿಟ್ಟಿನಲ್ಲಿ ಹಿಂದು ಸಮಾಜ ಜಾತಿ ಸಂಘಟನೆಯ ಬದಲು ಹಿಂದು ಸಮಾಜದ ಮೂಲಕ ಎಲ್ಲರೂ ಒಟ್ಟಾಗಿ ಆಕ್ರೋಶ ಭರಿತವಾಗಿ ಹಿಂದು ಸಮಾಜದ ಸುರಕ್ಷತೆಯನ್ನು ಕಾಪಾಡುವ ಕೆಲಸ ಮಾಡಬೇಕೆಂದವರು ಕರೆ ನೀಡಿದರು.
ಹಿಂಜಾವೇ ಪುತ್ತೂರಿನಲ್ಲಿ ಉತ್ತಮ ಸಂಘಟನೆಯಾಗಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ ಹಿಂದು ಜಾಗರಣ ವೇದಿಕೆ ಪುತ್ತೂರಿನಲ್ಲಿ ಒಂದು ಉತ್ತಮ ಶಕ್ತಿಯಾಗಿ ಬೆಳೆಯಬೇಕು.ಈ ನಿಟ್ಟಿನಲ್ಲಿ ಯುವ ಸಮುದಾಯ ಒಗ್ಗಟ್ಟಿನಲ್ಲಿರಬೇಕು ಎಂದರು.
ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾಲೂಕು ಸಂಯೋಜಕ ಕೀರ್ತನ್ ವೈಯುಕ್ತಿಕ ಗೀತೆ ಹಾಡಿದರು.ಜಿಲ್ಲಾ ಸಹ ಸಂಯೋಜಕ್ ದಿನೇಶ್ ಪಂಜಿಗ ವಂದಿಸಿದರು.ತಾಲೂಕು ಸಂಪರ್ಕ ಪ್ರಮುಖ್ ದಯಾನಂದ ಅಂಬುಲ ಅವರು ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಸಹಿತ ಹಿಂದು ಜಾಗರಣ ವೇದಿಕೆಯ ಪುತ್ತೂರು ಜಿಲ್ಲೆಯ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.ಬೆಳಗ್ಗಿನಿಂದ ವಿವಿಧ ಅವಧಿಯಲ್ಲಿ ಪ್ರಶಿಕ್ಷಣ ಕಾರ‍್ಯಾಗಾರ ನಡೆಯಿತು.