ಪುತ್ತೂರು : ಮಾ.8ರಂದು ಬಲ್ನಾಡು ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿ ಯಲ್ಲಿ ನಡೆಯಲಿರುವ 35ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂದಿರದಲ್ಲಿ ಫೆ.17ರಂದು ನಡೆಯಿತು.
ಸಾಜ ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಎಂ.ಮುರುಂಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ನಿರ್ದೇಶಕ ಚಂದಪ್ಪ ಪೂಜಾರಿ, ಬಲ್ನಾಡು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರವಿಚಂದ್ರ ಸಾಜ, ಸದಸ್ಯೆ ಶೋಭ ಮುರುಂಗಿ, ಜನಾರ್ಧನ ಪೂಜಾರಿ ಕಾಡ್ಲ, ಕೇಶವ ನಾಯ್ಕ್, ರಾಜೇಶ್ ಸಾಜ, ನಾಗೇಶ್ ಸಾಜ, ಭಾಸ್ಕರ ಕೂಟೇಲು, ಕೃಷ್ಣಪ್ಪ ಕೂಟೇಲು, ಅಭಿಷೇಕ್ ಸಾಜ, ಕೇಶವ, ರಾಮ ಪಾಟಾಳಿ, ಗಣೇಶ್, ಶಶಿಕುಮಾರ್ ಸಾಜ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ಮಾ.08ರಂದು ಸಂಜೆ 4 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಬಳಿಕ ಅರ್ಚಕರಾದ ಕುಮಾರ ಹೊಳ್ಳ ಇವರಿಂದ ಪೂಜಾ ಕಥಾ ಪ್ರವಚನ ನಡೆಯಲಿದೆ.
6.30ರಿಂದ ಸ್ಥಳೀಯರಿಂದ ಕುಣಿತ ಭಜನೆ ಹಾಗೂ ರಾತ್ರಿ 8ರಿಂದ ಅಧ್ಯಕ್ಷ ಬಾಲಕೃಷ್ಣ ಎಂ.ಮುರುಂಗಿ ಇವರ ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಾಫ್ಟ್ ವೇರ್ ವೃತ್ತಿಪರ ಸುಬೋದ್ ರೈ ಸಾಜ, ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರೀ ಬಬ್ಬಿಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು, ಸಾಯಿಕಲಾ ಯಕ್ಷಬಳಗ ಪುತ್ತೂರು ಇವರಿಂದ ಕದಂಬ ಕೌಶಿಕೆ ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.