ಪುತ್ತೂರು: ನಗರಸಭಾ ವತಿಯಿಂದ ನಗರೋತ್ಥಾನದ ಯೋಜನೆ ಅಡಿ ಶೆಲ್ ಪೆಟ್ರೋಲ್ ಪಂಪ್ ಬಳಿಯಿಂದ ಪ್ರಾರಂಭವಾದ ರಸ್ತೆ ಅಗಲೀಕರಣವಾಗಿ ಡಾಂಬಾರು ಕಾಮಗಾರಿಯನ್ನು ಪ್ರಾರಂಭಿಸಲು ನಗರಸಭಾ ಸದಸ್ಯ ಸಂತೋಷ್ ಅವರು ನಗರೋತ್ಥಾನದ ಅಧಿಕಾರಿ ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ನಗರಸಭಾ ಸದಸ್ಯ ಸಂತೋಷ್ ಕರ್ಮಲ ವಿಶ್ವಕರ್ಮ ಹಾಲ್ ಭಾಗದಿಂದ ಬರುವ ಮಳೆನೀರಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಅಧಿಕಾರಿಗಳು ಸೂಚನೆಗೆ ಸ್ಪಂಧಿಸಿ cow cather ನಿರ್ಮಿಸುವ ಭರವಸೆಯನ್ನು ನೀಡಿದರು.
ಇಂಜಿನಿಯರ್ ಭರತ್ ಹಾಗೂ ಗುತ್ತಿಗೆದಾರ ವೇದ ಕುಮಾರ್ ಉಪಸ್ಥಿತರಿದ್ದರು.